

ಗುರುಪುರ: ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಇದರ 71ನೇ ಸೇವಾ ಮಾಸಿಕ ಯೋಜನೆಯಲ್ಲಿ ಮೂರು ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಯಿತು.
ಎಡಪದವಿನ ರಾಮ ಮಂದಿರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅಡ್ಡೂರು ನೂಯಿ ಇಂದಿರಾನಗರದ ನಿವಾಸಿ ವಿಧವೆ ಸುಜಾತಾ ಶೆಟ್ಟಿ ಅವರಿಗೆ 50 ಸಾವಿರ ರೂ., ಅನಾರೋಗ್ಯಪೀಡಿತ ತಾಯಿಯ ಔಷಧಕ್ಕಾಗಿ ಮಿಜಾರು ಗ್ರಾಮದ ನೀರ್ಕೆರೆ ನಿವಾಸಿ ಗಂಗಾಧರ ಎಂಬುವರಿಗೆ 25 ಸಾವಿರ ರೂ. ಮತ್ತು ಮಂಗಳೂರು ತಾಲೂಕಿನ ಬೆಳ್ಳಚ್ಚಾರು ಸಮೀಪದ ಉರ್ಕಿ ನಿವಾಸಿ ಸೌಮ್ಯಾ ಎಂಬುವರ ವಿವಾಹ ವೆಚ್ಚವಾಗಿ 25 ಸಾವಿರ ರೂ. ಧನಸಹಾಯ ನೀಡಲಾಯಿತು. ಬ್ರಿಗೇಡ್ ಸಂಚಾಲಕರು, ಸಹ-ಸಂಚಾಲಕರು ಮತ್ತು ಸದಸ್ಯರು ಇದ್ದರು.