ಉಳ್ಳಾಲ: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಬೋಳಿಯಾರು ಗ್ರಾಮದ ವಿವಿಧ ಯೋಜನೆಗಳ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ಬೋಳಿಯಾರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆಯಿತು.

ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ವಾತನಾಡಿದರು. ಬೋಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಕೂರ್ ಬೋಳಿಯಾರು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರು, ತಾಲೂಕು ಪಂಚಾಯಿತಿ ವಾಜಿ ಸದಸ್ಯ ಜಬ್ಬಾರ್, ಅಲ್ಪಸಂಖ್ಯಾತ ನಿಗಮದ ವ್ಯವಸ್ಥಾಪಕ ಯಶೋಧರ ಜೆ., ಪಂಚಾಯಿತಿ ಅಭಿವದ್ಧಿ ಅಧಿಕಾರಿ ಸುಧಾರಾಣಿ, ಸದಸ್ಯರಾದ ಸಿದ್ದೀಕ್, ಸತೀಶ್ ಆಚಾರ್ಯ, ಜಸಿಂತಾ ಪಿಂಟೋ, ಮೈಮೂನ, ಸಾಯಿದಾ ಬಾನು, ವಾಜಿ ಸದಸ್ಯರಾದ ಯೂಸುಫ್, ರಿಯಾಝ್, ಅಬ್ದುಲ್ ಖಾದರ್, ಬೋಳಿಯಾರು ವಲಯ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್, ಹನೀಫ್ ಬಂಗ್ಲೆ ಮೊದಲಾದವರು ಉಪಸ್ಥಿತರಿದ್ದರು.