

ಮೂಲ್ಕಿ: ಸಂಘದ ಅಭಿವದ್ಧಿಯಲ್ಲಿ ಹೈನುಗಾರರ ಪಾತ್ರ ಮಹತ್ವದ್ದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಆಡಳಿತದ ಮೂಲಕ ಹೈನುಗಾರರಿಗೆ ಸರ್ಕಾರದ ಸವಲತ್ತು ದೊರಕಿಸಿಕೊಡಲು ಶ್ರಮ ವಹಿಸಲಾಗುವುದು ಎಂದು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಪದ್ಮಿನಿ ವಿಜಯಕುವಾರ್ ಶೆಟ್ಟಿ ಹೇಳಿದರು.
ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂದ ಆವರಣದಲ್ಲಿ ಶುಕ್ರವಾರ 2023-24ನೇ ಸಾಲಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಸಾಲಿನ ಲಾಭಾಂಶದಂತೆ ಸಂಘದ ಸದಸ್ಯರಿಗೆ ಶೇ.21 ಡಿವಿಡೆಂಡ್ ವಿತರಿಸಲಾಯಿತು. ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ವಿಜಯ ಆರ್.ಶೆಟ್ಟಿ(ಪ್ರ), ಜಯಶ್ರೀ ಶೆಟ್ಟಿ(ದ್ವಿ), ಹರಿಣಾಕ್ಷಿ(ತೃ) ಹಾಗೂ ಹೆಚ್ಚು ಕ್ವಾಲಿಟಿಯ ಹಾಲು ಹಾಕಿದ ಯಶೋದಾ ಟಿ. ಅವರಿಗೆ ಬಹುಮಾನ ನೀಡಲಾಯಿತು . ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸಂದೀಪ್ ಅವರು ಹೈನುಗಾರಿಕೆ ಬಗ್ಗೆ ವಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷೆ ಪ್ರಫುಲ್ಲಾ ಸಿ.ಶೆಟ್ಟಿ, ನಿರ್ದೇಶಕರಾದ ಶೋಭಾ ವಿ.ಶೆಟ್ಟಿ, ಲೀಲಾ ಎಸ್.ಶೆಟ್ಟಿ, ಬೇಬಿ ಕೆ., ಶೋಭಾ ಎ.ಶೆಟ್ಟಿ, ವನಿತಾ ಬಿ.ಶೆಟ್ಟಿ, ಗುಲಾಬಿ ಕೆ.ಪೂಜಾರಿ, ವತ್ಸಲಾ ಶೆಟ್ಟಿ, ಕಾರ್ಯದರ್ಶಿ ಮಮತಾ ಅನಿಲ್ ಶೆಟ್ಟಿ, ಹಾಲು ಪರೀಕ್ಷಕಿ ಅಶ್ವಿನಿ ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.
ಅಶ್ವಿನಿ ಸ್ವಾಗತಿಸಿದರು. ಪ್ರಫುಲ್ಲಾ ಸಿ.ಶೆಟ್ಟಿ ವಂದಿಸಿದರು. ಮಮತಾ ಅನಿಲ್ ಶೆಟ್ಟಿ ನಿರೂಪಿಸಿದರು.