ಬದುಕು ಕಟ್ಟೋಣ ಬನ್ನಿ ತಂಡದಿಂದ ನೆರವು

donate
ಬದುಕು ಕಟ್ಟೋಣ ಬನ್ನಿ ತಂಡದಿಂದ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
Published on

ಕಡಬ: ಕಡಬದ ಮಾನವೀಯ ಕಳಕಳಿಯ ಯುವಕರ ಸಂಯೋಜನೆಯಲ್ಲಿ ರೂಪುಗೊಂಡಿರುವ ಬದುಕು ಕಟ್ಟೋಣ ಬನ್ನಿ ವಾಟ್ಸಾಪ್ ಗ್ರೂಪ್‌ನ 5ನೇ ಸೇವಾ ಯೋಜನೆ ಫಲಾನುಭವಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಫಲಾನುಭವಿಯಾದ ಕುಟ್ರುಪ್ಪಾಡಿ ಗ್ರಾಮದ ಮುಳಿಯ(ಕಳಾರ) ನಿವಾಸಿ ಸೀತಾರಾಮ ಗೌಡ-ಕಮಲಾ ದಂಪತಿ ಪುತ್ರಿ ಸ್ನಾನಗೃಹದಲ್ಲಿ ಕಾಲುಜಾರಿ ಬಿದ್ದು, ಸೊಂಟದ ಸ್ವಾಧೀನ ಕಳೆದುಕೊಂಡಿರುವ ವಿಶಾಲಾಕ್ಷಿ (35)ಮನೆಗೆ ತಂಡದ ಸದಸ್ಯರ ಜತೆ ತೆರಳಿ 25 ಸಾವಿರ ರೂ. ಚೆಕ್ಕನ್ನು ಕಡಬ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ನಾಗರಾಜ್ ಎನ್.ಕೆ.ಹಸ್ತಾಂತರಿಸಿದರು. ಬದುಕು ಕಟ್ಟೋಣ ಬನ್ನಿ ತಂಡದ ಸಂಯೋಜಕ ಗಿರೀಶ್ ಕೊರುಂದೂರು, ಜೇಸಿಐ ಕಡಬ ಕದಂಬದ ಪೂರ್ವಾಧ್ಯಕ್ಷ ಕೆ.ಎಸ್.ದಿನೇಶ್ ಆಚಾರ್ಯ, ಪದಾಧಿಕಾರಿ ದಿನೇಶ್ ತುಂಬೆತ್ತಡ್ಕ, ಪ್ರಮುಖರಾದ ಉಮೇಶ್ ಪೂಜಾರಿ ಪೆಲತ್ತೋಡಿ, ಪ್ರಕಾಶ್ ಗೌಡ ಕೊಲ್ಲೆಸಾಗು, ಹಿರಣ್ಯ ದೊಡ್ಡಕೊಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net