ಭಾವನಾತ್ಮಕ ಅಸ ಬಳಸಿ ಸೋಲಿಸಲು ಹೋರಾಟ

FotoJet (1)
Published on

ರಾಮನಗರ: ಕಳೆದ ಎರಡು ಚುನಾವಣೆಗಳಲ್ಲೂ ಪ್ರಯೋಗಿಸಿದ ಭಾವನಾತ್ಮಕ ಅಸವನ್ನು ಈ ಬಾರಿಯು ಪ್ರಯೋಗಿಸಿ ನನ್ನನ್ನು ಸೋಲಿಸಲು ಬಾರಿ ಹೋರಾಟ ನಡೆಸುತ್ತಿದ್ದು, ಆದರೆ, ಈ ಬಾರಿ ತಾಲೂಕಿನ ಜನರ ಪ್ರೀತಿ ವಿಶ್ವಾಸ ನನ್ನ ಜತೆ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ನಗರದಲ್ಲಿ ಹಲವೆಡೆ ಭಾನುವಾರ ಚುನಾವಣಾ ಪ್ರಚಾರ ನಡೆಸಿ ವಾತನಾಡಿದ ಅವರು, ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ನೀವು ತೋರುತ್ತಿರುವ ಉತ್ಸಾಹ, ಪ್ರೀತಿ, ವಿಶ್ವಾಸ ಕಂಡು ಮೂಕ ವಿಸ್ಮಿತನಾಗಿದ್ದು, ಇದನ್ನು ಯಾವ ಭಾವನಾತ್ಮಕ ಅಸವು ತಡೆಯಲು ಸಾಧ್ಯವಿಲ್ಲವೆಂದರು.

ರಾಜ್ಯ ಸರ್ಕಾರ ಬಡವರು, ದೀನ-ದಲಿತರು, ರೈತರು ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಜತೆಗೆ ನೂರಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಇದೆಲ್ಲವನ್ನು ಮನಗಂಡಿರುವ ತಾಲೂಕಿನ ಸ್ವಾಭಿವಾನಿ ಮತದಾರರು ಆಡುತ್ತಿರುವ ವಾತುಗಳನ್ನು ಕೇಳಿದಾಗ ನನ್ನಲ್ಲಿ ಇನ್ನಷ್ಟು ಹುಮ್ಮಸ್ಸು ಮೂಡುತ್ತಿದೆ ಎಂದರು.

ಪಕ್ಷಾಂತರ ಸ್ವಾರ್ಥಕ್ಕಲ್ಲ:

ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ವಾಡುತ್ತಿರುವ ಪ್ರತಿ ಪಕ್ಷದವರು ಸುಳ್ಳು ಆರೋಪಗಳ ಮೂಲಕ ನನ್ನ ತೇಜೋವಧೆ ಮಾಡಿ, ಪಕ್ಷಾಂತರಿ ಎಂದು ಟೀಕಿಸುತ್ತಿದ್ದಾರೆ, ನಾನು ಪಕ್ಷಾಂತರ ವಾಡದಿದ್ದರೆ ಇಂದು ನೀವೆಲ್ಲ ಮತ ಕೇಳಲು ಬರುವ ನನಗೆ ಖಾಲಿ ಕೊಡಗಳನ್ನು ತೋರಿಸಿ ದಬಾಯಿಸುತ್ತಿದ್ದೀರಿ ಅಲ್ಲವೇ ಎಂದು ಸಿಪಿವೈ ಪ್ರಶ್ನಿಸಿದರು.

ಬರದಿಂದ ಕಂಗೆಟ್ಟಿದ್ದ ತಾಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು, ತಾಲೂಕು ಕಚೇರಿ, ನಗರಸಭೆ ಮುಂಭಾಗ ಪ್ರತಿದಿನ ನಗರ ನಿವಾಸಿಗಳು ಹಾಗೂ ಗ್ರಾಮೀಣ ಜನರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸುತ್ತಾ ಅಂದು ಶಾಸಕನಾಗಿದ್ದ ನನ್ನ ವಿರುದ್ಧ ದಿಕ್ಕಾರ ಕೂಗುತ್ತಿದ್ದ ದಿನಗಳನ್ನು ನೋಡಿ, ಇದೆಲ್ಲದಕ್ಕೂ ಪರಿಹಾರ ಹುಡುಕಲು ನಾನು ಪಕ್ಷಾಂತರ ವಾಡಬೇಕಾಯಿತೆ ವಿನಹಃ ನನ್ನ ಸ್ವಾರ್ಥಕ್ಕಲ್ಲ, ಅಧಿಕಾರ ದಾಹಕಲ್ಲ. ಇದನ್ನು ತಾಲೂಕಿನ ಜನ ಅರ್ಥವಾಡಿಕೊಳ್ಳಬೇಕೆಂದರು.

ಕುವಾರಸ್ವಾಮಿ ಕೊಡುಗೆ ಏನು?

ಗ್ರಾಮೀಣ ಭಾಗದಲ್ಲಿ ಕೆರೆ-ಕಟ್ಟೆಗಳು ಖಾಲಿಯಾಗಿದ್ದು, ರಸ್ತೆಗಳು ಸರಿಯಿಲ್ಲ, ಆ ಸಮಸ್ಯೆ ಈ ಸಮಸ್ಯೆ ಎಂದೇಳುತ್ತಾರೆ, ಇನ್ನೂ ನಗರದಲ್ಲಿ ಯುಜಿಡಿ ಸಮಸ್ಯೆ, ಕಸದ ಸಮಸ್ಯೆ ಕಗ್ಗಂಟಾಗಿದೆ. ಇದೆಲ್ಲವನ್ನು ವಾಡಬೇಕಿದ್ದವರು ಯಾರು ತಾಲೂಕಿನ ಶಾಸಕರಾಗಿದ್ದ ಕುವಾರಸ್ವಾಮಿಯವರೆ ಹೊರತು ನಾನಲ್ಲ. ನನ್ನನ್ನು ಸೋಲಿಸಲೇಬೇಕೆಂಬ ಏಕೈಕ ಉದ್ದೇಶದೊಂದಿಗೆ ಕುವಾರಸ್ವಾಮಿ ಎರಡು ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿ, ಬಳಿಕ ತಮ್ಮ ರಾಜಕೀಯ ಪುನರ್ಜನ್ಮಕ್ಕೆ ಮಂಡ್ಯಕ್ಕೆ ಹೋದವರಿಂದ ತಾಲೂಕಿನ ಅಭಿವೃದ್ಧಿ ಎಷ್ಟಾಗಿದೆ ಹೇಳಲಿ, ನಾನು ತಂದ ಹಲವು ಕೆಲಸಕಾರ್ಯಗಳನ್ನು ತಮ್ಮದೆಂದು ಹೇಳಿಕೊಂಡವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವೆಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿದ್ದು, ಸಾಕಷ್ಟು ಜನಪರ ಕೆಲಸ ವಾಡುತ್ತಿದೆ, ಕೆರೆ ತುಂಬಿಸಲು, ಅಭಿವೃದ್ಧಿಗೆ ವೇಗ ನೀಡಲು ಮತ್ತೊಮ್ಮೆ ಅವಕಾಶ ನೀಡುವಂತೆ ಮನವಿ ವಾಡಿದರು.

ಇದೇ ವೇಳೆ ಹನುಮಂತನಗರದ ಬಳಿ ಇರುವ ಅಪೆರಲ್ ಗಾಮೆರ್ಂಟ್ಸ್‌ಗೆ ಭೇಟಿ ನೀಡಿದ ಯೋಗೇಶ್ವರ್, ಕಾರ್ಮಿಕರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನನಗೆ ಮತ ಹಾಕಿ ಎಂದು ಕೈ ಮುಗಿದು ಮನವಿ ವಾಡಿಕೊಂಡರು.

ಪ್ರಚಾರದ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ,ರೇವಣ್ಣ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ಸೇರಿದಂತೆ ಅನೇಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net