ಇಡಿ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ

Published on

ಮಾಗಡಿ: ಕಾಂಗ್ರೆಸ್​ ಶಾಸಕರ ಮನೆಯ ಮೇಲೆ ಇಡಿ, ಆದಾಯ ತೆರಿಗೆ, ಸಿಬಿಐ ದಾಳಿ ನಡೆಸಿದೆ. ಈ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ವೈಯಕ್ತಿಕವಾಗಿ ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್​ ಜನಪ್ರಿಯ ಯೋಜನೆಗಳನ್ನು ನೀಡಿ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವುದರಿಂದ ವಿರೋಧಪಕ್ಷದವರಿಗೆ ಕಾಂಗ್ರೆಸ್​ ಬಗ್ಗುತ್ತಿಲ್ಲ ಎಂದು ಕರ್ನಾಟಕವನ್ನು ಗುರಿಯಾಗಿಸಿ ಇಡಿ ದಾಳಿ ಹೆಚ್ಚಿಸಿದೆ.

ಈ ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ, ಮಾಜಿ ಸಚಿವ ಎಚ್​.ಎಂ.ರೇವಣ್ಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net