ಇದು ಹಾಲಿನವರ ಬೀದಿಜಗಳ; ಗುಂಪು ಘರ್ಷಣೆಯಲ್ಲಿ ಮಾರಾಮಾರಿ, ಗಾಯಾಳುಗಳು ಜಿಲ್ಲಾಸ್ಪತ್ರೆಗೆ ದಾಖಲು

Untitled
Published on

ಕೋಲಾರ: ಇದು ಹಾಲು ಉತ್ಪಾದಕರ ನಡುವೆಯೇ ನಡೆದ ಜಗಳ. ಅಂದರೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಹಾಗೂ ನಿರ್ದೇಶಕರ ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಹೊಯ್​ಕೈ ಹಂತಕ್ಕೂ ಹೋಗಿ, ಎರಡೂ ಗುಂಪಿನವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂಥ ಪರಿಸ್ಥಿತಿಯೂ ಉಂಟಾಗಿದೆ.

ಕೋಲಾರದ ಹೂಹಳ್ಳಿ ಗ್ರಾಮದಲ್ಲಿ ಇಂಥದ್ದೊಂದು ಗುಂಪುಘರ್ಷಣೆ ನಡೆದಿದೆ. ರಸ್ತೆಯ ವಿಚಾರವಾಗಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಹಾಗೂ ನಿರ್ದೇಶಕ ಈರಪ್ಪ ಎಂಬವರ ಗುಂಪುಗಳ ನಡುವೆ ಮಾರಾಮಾರಿಯೇ ನಡೆದಿದೆ.

ಈ ಹೊಯ್​​ಕೈಯಲ್ಲಿ ಎರಡೂ ಗುಂಪುಗಳ ಹಲವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಎರಡೂ ಗುಂಪುಗಳಿಂದ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net