ಶಾಲೆಯಲ್ಲಿ ಇಬ್ಬರು ಮಕ್ಕಳ ಮಧ್ಯೆ ಗಲಾಟೆ! ಕಟ್ಟಿಗೆ ಇರಿತದಿಂದ ಕಣ್ಣಿನ ಗುಡ್ಡೆಯನ್ನೇ ಕಳೆದುಕೊಂಡ ವಿದ್ಯಾರ್ಥಿ...Bagalkote school

Bagalkote school
Published on

ಬಾಗಲಕೋಟೆ: ( Bagalkote school ) ಶಾಲೆಯಲ್ಲಿ ಇಬ್ಬರು ಮಕ್ಕಳ ಮಧ್ಯೆ ಗಲಾಟೆ ನಡೆದಿದ್ದು, ಕಟ್ಟಿಗೆ ಇರಿತದಿಂದ ಕಣ್ಣಿನ ಗುಡ್ಡೆಯನ್ನೇ ವಿದ್ಯಾರ್ಥಿ ಕಳೆದುಕೊಂಡಿದ್ದಾನೆ. ಈ ಘಟನೆ  ಬಾಗಲಕೋಟೆ ಜಿಲ್ಲೆಯ ಢವಳೇಶ್ವರ ಗ್ರಾಮದ ಮೊರಬದ ತೋಟದ ವಸತಿ ಶಾಲೆಯಲ್ಲಿ  ನಡೆದಿದೆ.

5ನೇ ತರಗತಿಯ ಸಮರ್ಥ ಬಲಗಣ್ಣು ಕಳೆದುಕೊಂಡ ವಿದ್ಯಾರ್ಥಿ ಭೀಮಪ್ಪ ಕಣ್ಣಿಗೆ ಕಟ್ಟಿಗೆ ಇರಿದಿರೋ ವಿದ್ಯಾರ್ಥಿ.  1ನೇ ತರಗತಿ ವಿದ್ಯಾರ್ಥಿ 5ನೇ ತರಗತಿ ವಿದ್ಯಾರ್ಥಿ ಕಣ್ಣಿಗೆ ಕಟ್ಟಿಗೆ ಇರಿದಿದ್ದಾನೆ.

ನಡೆದಿದ್ದೇನು? 

ಬಾಗಲಕೋಟೆ ಜಿಲ್ಲೆಯ ಢವಳೇಶ್ವರ ಗ್ರಾಮದ ಮೊರಬದ ತೋಟದ ಶಾಲೆಯಲ್ಲಿ ಪೆನ್ ವಾಪಸ್ಸ ಕೇಳುವ ವಿಚಾರದಲ್ಲಿ ಭೀಮಪ್ಪ ಹಾಗೂ ಸಮರ್ಥ ನಡುವೆ ಜಗಳ ಶುರುವಾಗಿದೆ.  1ನೇ ತರಗತಿ ವಿದ್ಯಾರ್ಥಿ 5ನೇ ತರಗತಿ ವಿದ್ಯಾರ್ಥಿ ಕಣ್ಣಿಗೆ ಕಟ್ಟಿಗೆ ಇರಿದಿದ್ದಾನೆ. ತೀವ್ರ ಗಾಯದ ಬೆನ್ನಲ್ಲೇ ಸಮರ್ಥನನ್ನು ಶ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ತೀವ್ರ ಗಾಯದ ಬೆನ್ನಲ್ಲೆ  ವೈದ್ಯರು ಕಣ್ಣಿನ ಗುಡ್ಡೆಯನ್ನೇ ತೆಗೆದಿದ್ದಾರೆ.

ಗಾಯಗೊಂಡ ವಿದ್ಯಾರ್ಥಿ ಸಧ್ಯ ಬೆಳಗಾವಿ ಜಿಲ್ಲೆಯ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು, ಚಿಕಿತ್ಸೆ ಪಡೆಯುತ್ತಿದ್ದಾನೆ. ಕಣ್ಣು ಗುಡ್ಡೆ ಕಳೆದುಕೊಂಡ ಮಗನ ಸ್ಥಿತಿ ಕಂಡು ಸಮರ್ಥನ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.  ಸದ್ಯ ಮಕ್ಕಳ ಜಗಳ ಆಗಾಗ ನಡೆಯುತ್ತಿದ್ರೂ ಕ್ರಮ ವಹಿಸದ ಶಿಕ್ಷಕರ ವಿರುದ್ಧ ದೂರಿದ್ದಾರೆ.

ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ತೋರಿದ ಶಿಕ್ಷಕರ ವಿರುದ್ಧ ಸ್ಥಳೀಯರು ಇತ್ತ ಜಮಖಂಡಿ ಎಸಿ ಶ್ವೇತಾ ಬಿಡಿಕರ್ ಗೂ ಮನವಿ ಸಲ್ಲಿಸಿದ್ದಾರೆ.

ಮುಖ್ಯಶಿಕ್ಷಕಿ ಜಯಶ್ರೀ ಹಾಗೂ ಅತಿಥಿ ಶಿಕ್ಷಕಿ ಶಿಲ್ಪಾ ಎಂಬುವವರ ವಿರುದ್ಧ ಮಹಾಲಿಂಗಪೂರ ಪೋಲಿಸ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net