ಹಣಕಾಸು ವಿಷಯದಲ್ಲಿ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ, ಹತ್ಯೆ ಆರೋಪಿ ಬಂಧನ

17sirsi6 arif
Published on

ಶಿರಸಿ: ತಾಲೂಕಿನ ದನಗನಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.


ಮುಂಡಗೋಡ ತಾಲೂಕು ಇಂದೂರು ಗ್ರಾಮದ ನಿವಾಸಿ ಮಲ್ಲಪ್ಪ ಕೆಂಚಣ್ಣವರ್ ಹತ್ಯೆಯಾಗಿದ್ದ. ದನಗನ ಹಳ್ಳಿಯ ಹಿಂಭಾಗದ ಬೆಟ್ಟದಲ್ಲಿ ಈತನ ಶವ ಪತ್ತೆಯಾಗಿತ್ತು. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ತನಿಖೆ ನಡೆಸಿದ ಪೊಲೀಸರು ದನಗನಹಳ್ಳಿಯ ಆರೀಫ್ ಹುಸೇನ್ ಎಂಬಾತನನ್ನು ಬಂಧಿಸಿದ್ದಾರೆ. ಈ ಇಬ್ಬರೂ ಸ್ನೇಹಿತರಾಗಿದ್ದು, ಟ್ಯ್ರಾಕ್ಟರ್ ಖರೀದಿ ಸಂಬಂಧ ಹಣದ ವಿಚಾರದಲ್ಲಿ ಇಬ್ಬರ ನಡುವೆ ದ್ವೇಷ ಉಂಟಾಗಿತ್ತು. ಕೆಲ ದಿನಗಳ ಹಿಂದೆ ಮಲ್ಲಪ್ಪ ದನಗನಹಳ್ಳಿಗೆ ಆಗಮಿಸಿ ಆರೀಫ್ ಜತೆ ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net