

ಮೈಸೂರು: ಸ್ನೇಹಿತರಿಬ್ಬರ ಮಧ್ಯೆ ಬಾರ್ನಲ್ಲಿ ಮದ್ಯದ ಮತ್ತಿನಲ್ಲಿ ಶುರುವಾದ ಜಗಳ, ಬಾರ್ನಿಂದ ಹೊರಬಂದ ಬಳಿಕವೂ ಮುಂದುವರಿದಿದ್ದು, ಕೊನೆಗೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರಿನ ಆಲನಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ.
ಆಲನಹಳ್ಳಿ ಬಾರ್ ಆ್ಯಂಡ್ ರೆಸ್ಟೋರೆಂಟ್ವೊಂದರಲ್ಲಿ ಕುಡಿಯುತ್ತಿದ್ದ ಸ್ನೇಹಿತರ ಮಧ್ಯೆ, ಮದ್ಯದ ಮತ್ತಿನಲ್ಲಿ ಜಗಳ ಆರಂಭವಾಗಿತ್ತು. ನಿವೇಶನವೊಂದರ ವಿಚಾರವಾಗಿ ಶುರುವಾದ ಈ ಜಗಳ ಬಾರ್ನಿಂದ ಹೊರಬಂದರೂ ಮುಗಿದಿರಲಿಲ್ಲ.
ಬಾರ್ನಿಂದ ಹೊರಬಂದಾಗ ನಡೆದ ವಾಗ್ವಾದದ ಸಂದರ್ಭ ಸ್ನೇಹಿತರಾದ ರಾಕೇಶ್, ಮಹೇಶ್, ಪ್ರಮೋದ್ ಅವರು ಕಿರಣ್ಗೆ ಚಾಕುವಿನಿಂದ ಇರಿದಿದ್ದರು.
ಗಾಯಗೊಂಡ ಕಿರಣ್ ಸಾವಿಗೀಡಾಗಿದ್ದು, ರಾಕೇಶ್ ಹಾಗೂ ಮಹೇಶ್ನನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಮೋದ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.