ಗೋ ಸಾನಿಧ್ಯದಿಂದ ಕ್ಷೇತ್ರ ವೃದ್ಧಿ

kota (9)
Published on

ಕೋಟ: ಗೋ ಸಾನ್ನಿಧ್ಯ ಕ್ಷೇತ್ರದ ಏಳಿಗೆಗೆ ಪೂರಕವಾಗಿದ್ದು, ಭಕ್ತ ಸಮುದಾಯದ ಮೆಚ್ಚುಗೆ ಗಳಿಸಿದೆ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಹೇಳಿದರು.

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದಲ್ಲಿ ಗೋಪೂಜೆಯಲ್ಲಿ ಮಾತನಾಡಿದರು. ಅರ್ಚಕ ಪಾರಂಪಳ್ಳಿ ಮಿಥುನ ಅಡಿಗ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಡಾ.ಕೆ.ಎಸ್.ಕಾರಂತ-ರಶ್ಮಿ ದಂಪತಿ ಗೋವುಗಳಿಗೆ ಗೋಗ್ರಾಸ ನೀಡಿದರು. ಗೋಪಾಲಕ ಸುಬ್ಬ ಮರಕಾಲರ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ದೇವಕಾರಿ ರಘುರಾಮ ಹೆಬ್ಬಾರ್, ಪೂಜಾ ಸಹಾಯಕ ಸಿಬ್ಬಂದಿ ನಾಗಭೂಷಣ ಹೆಬ್ಬಾರ್ ಮತ್ತು ರಾಮಚಂದ್ರ ಭಟ್, ದೇವಳ ಪ್ರಬಂಧಕ ನಾಗರಾಜ ಹಂದೆ, ಸಹಾಯಕ ಪ್ರಬಂಧಕ ಗಣೇಶ ಭಟ್, ಪ್ರಧಾನ ಬಾಣಸಿಗ ಸುಬ್ರಹ್ಮಣ್ಯ ಐತಾಳ, ಸಹಾಯಕ ಬಾಣಸಿಗ ಸಂಪತ್ ಮಧ್ಯಸ್ಥ, ಸಿಬ್ಬಂದಿ ಶಂಕರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net