

ಕಕ್ಕೇರಿ: ಗ್ರಾಮ ಹಾಗೂ ಸಮೀಪದ ಲಿಂಗನಮಠ, ಭೂರಣಕಿ, ಮಾಸ್ಕೆ ನಟ್ಟಿ, ಚುಂಚವಾಡ, ಸುರಪುರ, ಕರಿಕಟ್ಟಿ, ಸುರಪುರ& ಕೆರವಾಡ, ಗೋಧೋಳಿ, ಗುಂಡೊಳ್ಳಿ ಗ್ರಾಮಗಳಲ್ಲಿ ಶುಕ್ರವಾರ ಸಂಭ್ರಮದ ಹೋಳಿ ಹಬ್ಬ ಆಚರಿಸಲಾಯಿತು.
ವಿವಿಧ ಸಂಗೀತ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕಾಮಣ್ಣನಿಗೆ ಹೋಳಿಗೆ, ಕಡಬು, ಹುಗ್ಗಿ, ಹಾಲು, ಬಾಳೆಹಣ್ಣುಗಳನ್ನು ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಮಾರುತಿ ರಾಪನವರ, ಅಶೋಕ ರಾಪನವರ, ಲ$್ಮಣ ಚನ್ನಾಪುರ, ಸೋಮನಿಂಗ ಉಡಿಕೇರಿ, ಬಸ್ಸು ರೇಡೆಕರ, ಭಗವಂತ ಲೋಟ್ಯಾನಿ, ಶಾನೂರ ಮಾದಾರ, ಅರ್ಚಕ ಯಲ್ಲಪ್ಪ ಧಾಮನೇಕರ, ಈಶ್ವರ ಚವ್ಹನ್ನವರ, ಬಸ್ಸು ದುಂಡೆನ್ನವರ, ಬಿಷ್ಟಪ್ಪ ಕೇದಾರ್ಜಿ, ಯಲ್ಲಪ್ಪ ಗುಂಡೇನಟ್ಟಿ, ಬಸ್ಸು ಚವ್ಹಾಣ ಇತರರಿದ್ದರು.