ಸಂಭ್ರಮದಿಂದ ಜರುಗಿದ ಕ್ರಿಸ್‌ಮಸ್

chritsmas
ಮಾನ್ವಿ ಪಟ್ಟಣದ ಸೆಂಟ್‌ಮೇರಿಸ್ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್‌ನಲ್ಲಿ ಚರ್ಚ್‌ನ ಫಾದರ್ ಜ್ಞಾನಪ್ರಕಾಶಂ ಶಾಂತಿ ಸಂದೇಶ ಸಾರಿದರು. ಶಾಸಕ ಹಂಪಯ್ಯನಾಯಕ, ಪುರಸಭೆ ಮಾಜಿ ಅಧ್ಯಕ್ಷ ಹುಸೇನಪ್ಪ ಜಗ್ಲಿ, ಶರಣಪ್ಪನಾಯಕ ಗುಡದಿನ್ನಿ, ಚಂದ್ರ ಕಾಜಗಾರ ಇದ್ದರು.
Published on

ಮಾನ್ವಿ: ಪಟ್ಟಣದ ಸೆಂಟ್‌ಮೇರಿ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸೋಮವಾರ ಸಂಭ್ರಮ ಸಡಗರದಿಂದ ಆಚರಿಸಿದರು.
ಡಿ.24ರ ಮಧ್ಯರಾತ್ರಿಯಿಂದ ಡಿ.25 ಬೆಳಗಿನವರೆಗೆ ಚರ್ಚಿನಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು. ಚರ್ಚ್‌ನ ಫಾದರ್ ಜ್ಞಾನಪ್ರಕಾಶಂ ಯೇಸಕ್ರಿಸ್ತನ ಜನನದ ಸಂದೇಶಗಳನ್ನು ಸಾರಿದರು.

ಭೇಟಿ: ಶಾಸಕ ಹಂಪಯ್ಯನಾಯಕ ಕೋನಾಪುರಪೇಟೆ ಸೆಂಟ್‌ಮೇರಿ ಚರ್ಚ್, ಲೋಯೋಲಾ, ಪೋತ್ನಾಳ ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್‌ಸಾಬ್, ಮಾಜಿ ತಾಪಂ ಅಧ್ಯಕ್ಷ ರಾಜಾ ವಸಂತನಾಯಕ, ಶರಣಪ್ಪನಾಯಕ ಗುಡದಿನ್ನಿ, ರೇವಣಸಿದ್ದಯ್ಯಸ್ವಾಮಿ, ಬಸವರಾಜ ನಾಯಕ, ಶಂಕರ ಜಗ್ಲಿ, ಜಯಪ್ರಕಾಶ, ಮಲ್ಲೇಶ ಜಗ್ಲಿ, ದೇವೇಂದ್ರಪ್ಪ ಬೋಮ್ಮನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net