

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ವಾರ್ಷಿಕ ಉತ್ಸವ ಪ್ರಯುಕ್ತ ಶ್ರೀ ದೇವರ ಹಗಲು ರಥೋತ್ಸವ ನಡೆಯಿತು.
ಕ್ಷೇತ್ರದ ತಂತ್ರಿ ಕಳತ್ತೂರು ಕರುಣಾಕರ ತಂತ್ರಿ ಹಾಗೂ ಅರ್ಚಕ ಶಶಾಂಕ್ ಮುಚ್ಚಿಂತಾಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ, ಶ್ರೀ ದೇವರ ಹಗಲು ರಥೋತ್ಸವ, ಪಲ್ಲಪೂಜೆ, ಉತ್ಸವ ಬಲಿ, ಮಹಾ ಅನ್ನಸಂತರ್ಪಣೆ ನಡೆಯಿತು.
ಪ್ರಮುಖರಾದ ವಿಷ್ಣುಮೂರ್ತಿ ಆಚಾರ್ಯ, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಉದ್ಯಮಿ ರಾಮ ಮೂರ್ತಿ ರಾವ್, ಕ್ಷೇತ್ರದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಭುವನಾಭಿರಾಮ ಉಡುಪ, ಪಲ್ಕೆ ಶೇಖರ ದೇವಾಡಿಗ ಮುಂಬೈ, ವಿಪ್ರ ಸಂಪದದ ಅಧ್ಯಕ್ಷ ಸುಧಾಕರ್ ರಾವ್, ದೇವಪ್ರಸಾದ್, ಪಟೇಲ್ ವಿಶ್ವನಾಥ ರಾವ್, ಗೋಪಿನಾಥ ರಾವ್, ಸುರೇಶ ರಾವ್ ನೀರಳಿಕೆ, ರಾಘವೇಂದ್ರ ರಾವ್ ಕೆರೆಕಾಡು, ರವಿ ಶೆಟ್ಟಿ ಪುನರೂರುಗುತ್ತು, ರಮೇಶ್ ರಾವ್ ಮೂಡುಮನೆ, ಚಂದ್ರಶೇಖರರಾವ್ ಎಸ್.ಕೋಡಿ ಉಪಸ್ಥಿತರಿದ್ದರು.