ಅರ್ಹರಿಗೆ ಸಿಗಲಿದೆ ನ್ಯಾಯ: ಸುರೇಂದ್ರ ಕಂಬಳಿ ಭರವಸೆ

Gur_Shibira
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಬಹುತೇಕ ಯಶಸ್ವಿಯಾಗಿದೆ. ಆದಾಗ್ಯೂ ಕೆಲವರ ಹೆಸರು ಬಿಟ್ಟು ಹೋಗಿದ್ದು, ಅವರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗ್ರಾಮಾಂತರ ಮಟ್ಟದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಶಿಬಿರ ಆಯೋಜಿಸಲಾಗುತ್ತಿದೆ. ಅರ್ಹರೆಲ್ಲರೂ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಜಮೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಹೇಳಿದರು.

ಗುರುಪುರ ಗ್ರಾ.ಪಂ. ಸಭಾಭವನದಲ್ಲಿ ‘ಪಂಚ ಗ್ಯಾರಂಟಿ’ ಯೋಜನೆ ಅನುಷ್ಠಾನದಲ್ಲಿ ಬಿಟ್ಟು ಹೋಗಿರುವ ಫಲಾನುಭವಿಗಳ ಹೆಸರು ನೋಂದಣಿ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಗುರುಪುರ ಗ್ರಾ.ಪಂ. ಅಧ್ಯಕ್ಷೆ ಸಫರಾ ಮದಕ ಅಧ್ಯಕ್ಷತೆ ವಹಿಸಿದ್ದರು. ಗುರುಪುರ ಗ್ರಾಪಂ ಉಪಾಧ್ಯಕ್ಷ ದಾವೂದ್ ಬಂಗ್ಲೆಗುಡ್ಡೆ, ಸದಸ್ಯರಾದ ಯಶವಂತ ಶೆಟ್ಟಿ, ಶೋಭಾ ಎ., ಸದಾಶಿವ ಶೆಟ್ಟಿ ಕೆ., ಬಾಲಕೃಷ್ಣ ಕೋಟ್ಯಾನ್, ಬಬಿತಾ, ಸಂಪಾ, ಅಶ್ರಫ್ ನಡುಗುಡ್ಡೆ, ಶಾಹಿಕ್, ಬುಶ್ರಾ, ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯ ಅಲಿಸ್ಟನ್, ತಾಲೂಕು ಸಮಿತಿ ಸದಸ್ಯರಾದ ಜಯಂತಿ ಡಿ., ಮುಸ್ತಫಾ, ನವಾಝ್ ಕೆ.ಬಿ.ಆರ್., ನೀಮಾ ಡಿಸೋಜ, ಗುರುಪುರ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಲ್ಲಿ, ಕೆಡಿಪಿ ಮಾಜಿ ಸದಸ್ಯ ಜಿ.ಮೊಹಮ್ಮದ್ ಉಂಞ, ಮೂಡುಶೆಡ್ಡೆ ಪಿಡಿಒ ಜಯಪ್ರಕಾಶ್, ಅಂಗನವಾಡಿ ಮೇಲ್ವಿಚಾರಕಿ ಅಶ್ವಿನಿ ಉಪಸ್ಥಿತರಿದ್ದರು.

ಗುರುಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಕಜಾ ನಿರೂಪಿಸಿದರು. ಪಂಚಾಯಿತಿ ಅಧ್ಯಕ್ಷೆ ಸಫರಾ ಮದಕ ನೇತೃತ್ವದ ನಿಯೋಗವು ಸರ್ಕಾರಿ ಬಸ್‌ಗಾಗಿ ಮನವಿ ಸಲ್ಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net