ಕನ್ನಾರು ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

Published on

ಕೊಕ್ಕರ್ಣೆ: ಕನ್ನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.14ರಂದು ವಾರ್ಷಿಕ ಜಾತ್ರಾ ಮಹೋತ್ಸವ ಜರುಗಲಿದೆ. ಮಾ.9ರಿಂದ 17ರ ಪರ್ಯಂತ ಸಂಜೆ 6ರಿಂದ ರಂಗಪೂಜೆ ಸೇವೆ, 13ರಂದು ಬೆಳಗ್ಗೆ 9ರಿಂದ ದೇವಸ್ಥಾನದ ನಾಗದೇವರಿಗೆ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಕಣ್ವತೀರ್ಥ ನಾಗಬ್ರಹ್ಮ ಮೂಲಸ್ಥಾನದಲ್ಲಿ ನವಕ ಪ್ರಧಾನ ಕಲಶ, ಅಧಿವಾಸ ಹೋಮ, ಮಹಾಪೂಜೆ, ಪ್ರಸಾದ ವಿತರಣೆ, 14ರಂದು ಬೆಳಗ್ಗೆ 8ರಿಂದ ದೇವಿ ಸಾನಿಧ್ಯದಲ್ಲಿ ಪ್ರಾರ್ಥನೆ, ಗುರುಗಣಪತಿ ಪೂಜೆ, ಪುಣ್ಯಾಹ, ಗಣಪತಿ ಹೋಮ, ಚಂಡಿಕಾ ಹೋಮ, ದೇವಿಗೆ ನವಕಪ್ರಧಾನ ಕಲಶ, ಅಧಿವಾಸ ಹೋಮ ಕಲಶಾಭಿಷೇಕ, ಮಧ್ಯಾಹ್ನ 11 ಗಂಟೆಗೆ ವೀಣಾ ಪವನ್ ಪ್ರಭು ಗೋರ್ಪಳ್ಳಿ ಮತ್ತು ಬಳಗ ಅವರಿಂದ ಭಕ್ತಿ ಸಂಗೀತ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಹಾಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ 6.30ರಿಂದ ಅರೆಹೊಳೆ ಪ್ರತಿಷ್ಠಾನ ಮಂಗಳೂರು ನಂದಗೋಕುಲ ಕಲಾವಿದರಿಂದ ನೃತ್ಯ ವೈಭವ, ರಾತ್ರಿ 10ಕ್ಕೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಅವರಿಂದ ಪೌರಾಣಿಕ ಪ್ರಸಂಗ ಯಕ್ಷಗಾನ ರಾತ್ರಿ 7 ಗಂಟೆಗೆ ಬೈನಬಲಿ ಉತ್ಸವ, ಕಟ್ಟೆಪೂಜೆ, ಚಂದ್ರಮಂಡಲ, ರಥೋತ್ಸವ, ಕಾಂಚಾಳ, ಅನ್ನಪ್ರಸಾದ ವಿತರಣೆ, ರಾತ್ರಿ 10ಕ್ಕೆ ಗೆಂಡಸೇವೆ, ರಾತ್ರಿ 1ರಿಂದ ದೊಡ್ಡರಂಗಪೂಜೆ, ಮಾರಿಪೂಜೆ, ಪ್ರಸಾದ ವಿತರಣೆ. 15, 16, 17ರಂದು ಸಂಜೆ ರಂಗಪೂಜೆ, 16ರಂದು ಬೆಳಗ್ಗೆ ಚಂಡಿಕಾಹೋಮ, ರಾತ್ರಿ 10ಕ್ಕೆ ಶ್ರೀ ವೀರ ಕಲ್ಕುಡ ಕಾಲಾವಧಿ ಕೋಲ ಸೇವೆ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net