ಪೊಲೀಸ್ ಬಂದೋಬಸ್ತಿನಲ್ಲಿ ಗೊಬ್ಬರ ವಿತರಣೆ

ಕೊಟ್ಟೂರಿನ ಸಹಕಾರ ಸಂಘದಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ರೈತರಿಗೆ ಮಂಗಳವಾರ ಯೂರಿಯಾ ರಸಗೊಬ್ಬರ ಮಾರಾಟ ಮಾಡಲಾಯಿತು. ಪಿಎಸ್‌ಐ ಗೀತಾಂಜಲಿ ಶಿಂಧೆ, ಕೃಷಿ ಅಧಿಕಾರಿ ಶ್ಯಾಂಮಸುಂದರ್, ಪೊಲೀಸ್ ಸಿಬ್ಬಂದಿ ಇದ್ದರು.
ಕೊಟ್ಟೂರಿನ ಸಹಕಾರ ಸಂಘದಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ರೈತರಿಗೆ ಮಂಗಳವಾರ ಯೂರಿಯಾ ರಸಗೊಬ್ಬರ ಮಾರಾಟ ಮಾಡಲಾಯಿತು. ಪಿಎಸ್‌ಐ ಗೀತಾಂಜಲಿ ಶಿಂಧೆ, ಕೃಷಿ ಅಧಿಕಾರಿ ಶ್ಯಾಂಮಸುಂದರ್, ಪೊಲೀಸ್ ಸಿಬ್ಬಂದಿ ಇದ್ದರು.
Published on

ಕೊಟ್ಟೂರು: ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು, ರೈತರು ಗೊಬ್ಬರದ ಅಂಗಡಿಗಳಿಗೆ ಅಲೆಯುತ್ತಿದ್ದಾರೆ.

ತಾಲೂಕಿನಲ್ಲಿ 32 ರಸಗೊಬ್ಬರ ಮಾರಾಟದ ಅಂಗಡಿಗಳು, ಆರು ಸಹಕಾರ ಸಂಘಗಳ ಮೂಲಕ ಯೂರಿಯಾ ಮಾರಾಟ ಮಾಡಲಾಗುತ್ತಿದ್ದು, ಪ್ರಸ್ತುತ ಎಲ್ಲಿಯೂ ಯೂರಿಯಾ ಸಿಗುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಕೆ.ಅಯ್ಯನಹಳ್ಳಿ, ತೂಲಹಳ್ಳಿ, ನಿಂಬಳಗೆರೆ, ಇಫ್ಕೋ ಜಂಕ್ಷನ್, ಪಟ್ಟಣದ ಸಹಕಾರ ಸಂಘಕ್ಕೆ ಯೂರಿಯಾ ಬಂದಿದೆ. ಆದರೆ, ಉಜ್ಜಿನಿ, ನಿಂಬಳಗೆರೆ ಸೇರಿದಂತೆ ಇತರ ಸಹಕಾರ ಸಂಘಗಳಲ್ಲಿ ಯೂರಿಯಾ ಲಭ್ಯವಿಲ್ಲ.

ಕೊಟ್ಟೂರಿನಲ್ಲಿ 32 ರಸಗೊಬ್ಬರ ಮಾರಾಟ ಅಂಗಡಿ, ಒಂದು ಸಹಕಾರ ಸಂಘವಿದ್ದು, ಮಂಗಳವಾರ ಸಹಕಾರ ಸಂಘ ಹಾಗೂ ಎರಡು ರಸಗೊಬ್ಬರದ ಅಂಗಡಿಗೆ ಯೂರಿಯಾ ಬಂದಿದ್ದು, ಪೊಲೀಸ್ ಬಂದೋಬಸ್ತಿನಲ್ಲಿ ರೈತರಿಗೆ ಮಾರಾಟ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net