ಸ್ತ್ರೀಕುಲದ ಗೌರವ ಹೆಚ್ಚುತ್ತಿರುವುದು ಶ್ಲಾನೀಯ

filter: 0; jpegRotation: 0; fileterIntensity: 0.000000; filterMask: 0;
filter: 0; jpegRotation: 0; fileterIntensity: 0.000000; filterMask: 0;
Published on

ಬೈಲಹೊಂಗಲ: ಅನಾದಿ ಕಾಲದಿಂದಲೂ ಶೋಷಣೆಗೆ ಒಳಗಾದ ಮಹಿಳೆ ಪ್ರಸ್ತುತ ದಿನಗಳಲ್ಲಿ ಎಲ್ಲ ರಂಗಗಳಲ್ಲೂ ಸಾಧನೆಗೈದು ಸ್ತ್ರೀ ಕುಲದ ಗೌರವ ಹೆಚ್ಚಿಸಿರುವುದು ಶ್ಲಾನೀಯ ಎಂದು ಎಸಿ ಪ್ರಭಾವತಿ ಕೀರಪುರ ಹೇಳಿದರು.

ಪಟ್ಟಣದ ಗಣಾಚಾರಿ ಶಿಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಪದವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆಯಡಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಸಾಂಸತಿಕ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳಾ ಸಂಸತಿ ಹಬ್ಬದ ಮೂಲಕ ನಾಡಿನ ಸಂಸತಿ, ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುತ್ತಿರುವ ಗಣಾಚಾರಿ ಶಿಣ ಸಂಸ್ಥೆ ಕಾರ್ಯ ಮಾದರಿಯಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ರ್ನಿದಿಷ್ಟ ಗುರಿ ಹೊಂದಿ ಅದರೆಡೆಗೆ ನಿರಂತರ ಪ್ರಯತ್ನ ಮಾಡಬೇಕು ಎಂದರು.

ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ್​ ಮಾತನಾಡಿ, ತೊಟ್ಟಿಲು ತೂಗುವ ಕೈ ರಾಷ್ಟ್ರವನ್ನೇ ಮುನ್ನಡೆಸಬಲ್ಲದು ಎಂಬುದಕ್ಕೆ ಪ್ರಸ್ತುತ ರಾಷ್ಟ್ರಪತಿಯವರೇ ನಿದರ್ಶನವಾಗಿದ್ದಾರೆ. ಮಹಿಳೆಯರ ಮೇಲೆ ಶೋಷಣೆ ನಿಲ್ಲದಿರುವುದು ವಿಷಾದನೀಯ ಎಂದರು.

ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿಗೆ ಪುಷ್ಪಾರ್ಪಣೆ ನೆರವೇರಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು. ಗ್ರಾಮೀಣ ಸೊಬಗಿನ ಸಂಸತಿ, ಪರಂಪರೆ ವಿದ್ಯಾರ್ಥಿನಿಯರ ರೂಪಕ, ಮನರಂಜನೆ ಕಾರ್ಯಕ್ರಮ ಗಮನ ಸೆಳೆದವು.

ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ, ಸಂಸ್ಥೆ ಅಧ್ಯ ಬಿ.ಬಿ.ಗಣಾಚಾರಿ, ಸವಿತಾ ನಾಯ್ಕ, ಅಪರ್ಣಾ ಗಣಾಚಾರಿ, ನಟಿ ರಾಜೇಶ್ವರಿ ದೇಶಪಾಂಡೆ, ಸರಿಗಮಪ ಸೀಸನ್​ 21ರ ಸ್ಪರ್ಧಿ ಅನಘಾ ಪಾಟೀಲ, ಸುನಿತಾ ಚಿಕ್ಕೊಪ್ಪ ಇತರರಿದ್ದರು. ಶ್ರೇಯಾ ಭದ್ರಶೆಟ್ಟಿ ಸ್ವಾಗತಿಸಿದರು. ಮೇಘಾನಾ ಅಂಗಡಿ ಮತ್ತು ನೀಶಾ ಮುಕುಂದ ನಿರೂಪಿಸಿದರು. ವಿಜಯಲ$್ಮ ಉಳವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net