ತೊಟ್ಟಿಲಲ್ಲಿ ಮಲಗಿದ್ದ ಮಗು ಮರುದಿನ ಬಾವಿಯಲ್ಲಿ ಶವವಾಗಿ ಪತ್ತೆ: ಪ್ರಕರಣ ಭೇದಿಸಿದ ಪೊಲೀಸರು

Child Death
Published on

ಉತ್ತರಕನ್ನಡ: 40 ದಿನದ ಹಸಿಗೂಸನ್ನು ಬಾವಿಗೆಸೆದು ಕೊಲೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಉತ್ತರ ಕನ್ನಡ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಘಾತಕಾರಿಯೆಂದರೆ ಹೆತ್ತ ತಂದೆ-ತಾಯಿಯೇ ಮಗುವನ್ನು ಬಾವಿಗೆ ಎಸೆದು ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಚಂದ್ರಶೇಖರ್ ಭಟ್ ಹಾಗೂ ಪ್ರಿಯಾಂಕಾ ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಅಗಸ್ಟ್ 2ರಂದು ಯಲ್ಲಾಪುರ ತಾಲೂಕಿನ ರಾಮನಕೊಪ್ಪದಲ್ಲಿ ಘಟನೆ ನಡೆದಿತ್ತು. ಅಂದು 40 ದಿನದ ಹೆಣ್ಣು ಶಿಶುವನ್ನು ಬಾವಿಗೆ ಎಸೆಯಲಾಗಿತ್ತು. ತೊಟ್ಟಿಲಲ್ಲಿ ಮಲಗಿದ್ದ ಮಗು ಮರು ದಿನ ಬಾಯಿಯಲ್ಲಿ ಶವವಾಗಿ ಪತ್ತೆಯಾಗಿತ್ತು.

ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತೀವ್ರ ವಿಚಾರಣೆ ನಡೆಸಿದ ಪೋಲಿಸರಿಗೆ ಹೆಣ್ಣು ಮಗು ಎಂಬ ಕಾರಣಕ್ಕೆ ಪಾಲಕರೇ ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಕೊಲೆ ಮಾಡಿದ ಬಳಿಕ ಮಗು ನಾಪತ್ತೆ ಎಂದು ನಾಟಕವಾಡಿರುವುದು ಬೆಳಕಿಗೆ ಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net