ಆರೈಕೆದಾರರಿಗೆ 5 ಸಾವಿರ ರೂ. ಭತ್ಯೆ ನೀಡಿ

Untitled design
ಲಿಂಗಸುಗೂರು ಸಹಾಯಕ ಆಯುಕ್ತ ಅವಿನಾಶ ಶಿಂಧೆಗೆ ಅಂಗವಿಕಲರ ಸಂಘ-ಸಂಸ್ಥೆಗಳ ಒಕ್ಕೂಟ ಮನವಿ ಸಲ್ಲಿಸಿತು. ಒಕ್ಕೂಟದ ತಾಲೂಕು ಅಧ್ಯಕ್ಷ ಅಜ್ಮಲ್ ಅಹ್ಮದ್, ಗೌರವಾಧ್ಯಕ್ಷ ಅಬ್ದುಲ್ ಮಜೀದ್, ರಾಜ್ಯ ಕಾರ್ಯದರ್ಶಿ ಸುರೇಶ ಭಂಡಾರಿ, ರಾಜ್ಯ ಸಮಿತಿ ಸದಸ್ಯ ನಿಂಗನಗೌಡ, ಪ್ರಮುಖರಾದ ಕಾಡಪ್ಪ ಖೈರವಾಡಗಿ, ರಜೀಯಾ ಬೇಗಂ, ನಾಗರಾಜ ಅಸ್ಕಿಹಾಳ, ಯಲ್ಲಪ್ಪ ನಾಗಲಾಪುರ, ಚೈತ್ರಾ ಇದ್ದರು.
Published on

ಲಿಂಗಸುಗೂರು: ಅಂಗವಿಕಲರು ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳ್ಳಲು ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂದು ಒತ್ತಾಯಿಸಿ ರಾಜ್ಯ ಅಂಗವಿಕಲರ ಸಂಘ-ಸಂಸ್ಥೆಗಳ ಒಕ್ಕೂಟ ಎಸಿ ಅವಿನಾಶ ಶಿಂಧೆಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಅಂಗವಿಕಲರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ

ಇಂದಿನ ದಿನಮಾನಗಳಲ್ಲಿ ಬೆಲೆ ಏರಿಕೆಯಿಂದ 800 ರೂ. ಹಾಗೂ 1400 ರೂ. ಮಾಸಾಶನ ಯಾವುದಕ್ಕೂ ಸಾಕಾಗುತ್ತಿಲ್ಲ. ಐದು ಸಾವಿರ ರೂ. ಮಾಸಾಶನ ನಿಗದಿಗೊಳಿಸಬೇಕು. ಸರ್ಕಾರ 21 ಬಗೆಯ ನ್ಯೂನತೆಯುಳ್ಳವರನ್ನು ಅಂಗವಿಕಲರೆಂದು ಪರಿಗಣಿಸಿದ್ದು, ಅಂಗವಿಕಲರ ಸಮಗ್ರ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಎಲ್ಲ ಸರ್ಕಾರಿ ಕಚೇರಿ ಮತ್ತು ಶಾಲಾ-ಕಾಲೇಜುಗಳಲ್ಲಿ ರ‌್ಯಾಂಪ್, ರೈಲಿಂಗ್, ಶೌಚಗೃಹ, ವ್ಹೀಲ್ ಚೇರ್ ಸೌಲಭ್ಯಕ್ಕಾಗಿ ಅನುದಾನ ಮೀಸಲಿಡಲು ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ರಿಯಾಯತಿ ಬಸ್ ಪಾಸ್ ಪ್ರಯಾಣ ಮಿತಿಯನ್ನು 250 ಕಿಮೀ.ಗೆ ವಿಸ್ತರಿಸಬೇಕು. ವಿವಾಹ ಪ್ರೋತ್ಸಾಹ ಧನ 3 ಲಕ್ಷ ರೂ.ಗೆ ಹೆಚ್ಚಿಸಬೇಕು. ರಾಜಸ್ಥಾನ ಮಾದರಿಯಲ್ಲಿ ನಗರ ಮತ್ತು ಗ್ರಾಮೀಣ ಸಂಸ್ಥೆಗಳಲ್ಲಿ ಅಂಗವಿಕಲರ ನಾಮನಿರ್ದೇಶನಕ್ಕೆ ಆದ್ಯತೆ ನೀಡಬೇಕು. ಸ್ವಯಂ ಉದ್ಯೋಗಕ್ಕಾಗಿ ವಿಶೇಷ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಅಂಗವಿಕಲರ ಆರೈಕೆದಾರರಿಗೆ 5 ಸಾವಿರ ರೂ. ಆರೈಕೆ ಭತ್ಯೆ ಮತ್ತು ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಬೇಕು. ಪುನರ್ವಸತಿ ವಿಶೇಷ ಯೋಜನೆ ಜಾರಿಗೊಳಿಸಬೇಕು. ಗ್ರಾಪಂ, ಜಿಪಂನಲ್ಲಿ ಮೀಸಲಿಟ್ಟ ಶೇ. 5 ಅನುದಾನ 2020 ರಿಂದ ಬಳಕೆಯಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಭಾಗದ ಅಂಗವಿಕಲರು ಸಂಕಷ್ಟ ಎದುರಿಸುವಂತಾಗಿದ್ದು, ಬಳಕೆಗೆ ಸುತ್ತೋಲೆ ಹೊರಡಿಸಬೇಕು. ಅಂಗವಿಕಲರ ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸಲಾಯಿತು. ಪ್ರಮುಖರಾದ ದಾವಲಮಲಿಕ್, ವೀರಭದ್ರಪ್ಪ, ಹುಸೇನ್ ಬಾಷಾ, ಅಮರೇಶ, ಮಂಜುನಾಥ, ಸಂಗಮೇಶ, ಪರಸಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net