16ರಂದು ವಾರ್ಷಿಕೋತ್ಸವ

Published on

ಸುಂಟಿಕೊಪ್ಪ: ಹೊಸಕೋಟೆ ಕಲ್ಲುಕೊರೆಯ ಭದ್ರಕಾಳಿ ದೇವಸ್ಥಾನದ 47ನೇ ವಾರ್ಷಿಕೋತ್ಸವ ಫೆ.16ರಂದು ನಡೆಯಲಿದೆ.


ವಾರ್ಷಿಕೋತ್ಸವದ ಅಂಗವಾಗಿ ಭದ್ರಕಾಳಿ, ನಾಗದೇವರ ಮತ್ತು ಪರಿವಾರ ದೇವರ ಪೂಜೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 6 ಗಂಟೆಗೆ ಶುದ್ಧಪೂಜೆ, 6.30 ಗಂಟೆಗೆ ಗಣಪತಿ ಹೋಮ, 8 ಗಂಟೆಗೆ ನಾಗದೇವರ ಪೂಜೆ, 9.30 ಗಂಟೆಗೆ ದೇವಿಪೂಜೆ ಹಾಗೂ ದರ್ಶನವಿದೆ. ಮಧ್ಯಾಹ್ನ 12 ಗಂಟೆಗೆ ಕುರುದಿ ಪೂಜೆ, 12.30 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ದೀಪಾರಾಧನೆ, 7.30 ಗಂಟೆಗೆ ಮಹಾಮಂಗಳಾರತಿ, 8 ಗಂಟೆಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net