ಹಿಂದುಕಪ್ ಫುಟ್ಬಾಲ್ ಪ್ರಶಸ್ತಿ ಎಫ್‌ಸಿ ಗೌಡಳ್ಳಿ ತಂಡಕ್ಕೆ

ಹಿಂದುಕಪ್ ಫುಟ್ಬಾಲ್ ಪ್ರಶಸ್ತಿ ಎಫ್‌ಸಿ ಗೌಡಳ್ಳಿ ತಂಡಕ್ಕೆ
Published on

ಸೋಮವಾರಪೇಟೆ: ಗೌಡಳ್ಳಿ-ದೊಡ್ಡಮಳ್ತೆ ಹಿಂದು ಗೆಳೆಯರ ಬಳಗದ ವತಿಯಿಂದ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಭಾನುವಾರ, ಸೋಮವಾರ ನಡೆದ ಪ್ರತಿಷ್ಠಿತ ಹಿಂದು ಕಪ್ ಫುಟ್ಬಾಲ್ ಪ್ರಶಸ್ತಿಯನ್ನು ಫ್ರೆಂಡ್ಸ್ ಎಫ್‌ಸಿ ಗೌಡಳ್ಳಿ ತಂಡ ಮುಡಿಗೇರಿಸಿಕೊಂಡು, 1.50ಲಕ್ಷ ರೂ.ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿತು.

ಬೀಟಿಕಟ್ಟೆ ನೀಲ್‌ಶಾಂತ್ ಬಾಯ್ಸ ತಂಡ ದ್ವಿತೀಯ ಸ್ಥಾನದೊಂದಿಗೆ 1 ಲಕ್ಷ ರೂ. ನಗದು ಮತ್ತು ಟ್ರೋಫಿಯನ್ನು ಪಡೆದುಕೊಂಡಿತು.

ರೋಚಕ ಫೈನಲ್ ಪಂದ್ಯದ ಕೊನೆ ಒಂದು ನಿಮಿಷದಲ್ಲಿ ವಿಜೇತ ತಂಡ ಗೋಲುಗಳಿಸಿ ವಿಜಯದ ನಗೆ ಬೀರಿತು. ಮೊದಲ ಸೆಮಿಫೈನಲ್‌ನಲ್ಲಿ ಗೌಡಳ್ಳಿ ಎಫ್‌ಸಿ ತಂಡ, ಕೋಟೆಯೂರು ಎಫ್‌ಸಿ ತಂಡದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ತಲುಪಿತು. ಎರಡನೆ ಸೆಮಿ ಫೈನಲ್‌ನಲ್ಲಿ ನೀಲ್‌ಶಾಂತ್ ಬಾಯ್ಸ ತಂಡ, ಎಫ್‌ಸಿ ಬೀಟಿಕಟ್ಟೆ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ಫೈನಲ್‌ಗೇರಿತ್ತು.

ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯುಗಾದಿ ಹಬ್ಬದ ಪ್ರಯುಕ್ತ ಪುಟ್ಬಾಲ್ ಪಂದ್ಯ ಆಯೋಜಿಸಿ ಗ್ರಾಮೀಣ ಜನರು ಹಾಗು ಕ್ರೀಡಾಪ್ರೇಮಿಗಳಿಗೆ ಕ್ರೀಡಾಹಬ್ಬದ ರಸದೌತಣ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕ್ರೀಡೆ ಕೊಡಗಿನ ಪ್ರತಿಯೊಬ್ಬರ ರಕ್ತದಲ್ಲಿಯೇ ಇದೆ. ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಜವಾಬ್ದಾರಿಯನ್ನು ನಾವೆಲ್ಲರೂ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು. ಮೈದಾನದಲ್ಲಿ ಪಂದ್ಯ ನಡೆಯುವಾಗ, ವೀಕ್ಷಿಸಲು ಬಂದವರಿಗೆ ಕೂರುವುದಕ್ಕೆ ಗ್ಯಾಲರಿಗಳನ್ನು ಮಾಡಬೇಕಾಗಿದೆ ಎಂದು ಹೇಳಿದರು.

ಹಿಂದು ಗೆಳೆಯರ ಬಳಗದ ಅಧ್ಯಕ್ಷ ಕೆ.ಪಿ.ಆದರ್ಶ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಉದ್ಯಮಿ ಹರಪಳ್ಳಿ ರವೀಂದ್ರ, ಎಸ್.ಬಿ.ಭರತ್, ಬಿ.ಬಿ.ಭಾರತೀಶ್, ಮಹೇಶ್ ತಿಮ್ಮಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net