ಬಿಡದಿ: ಇಲ್ಲಿಗೆ ಸಮೀಪದ ಅವರಗೆರೆ ಗ್ರಾಮದಲ್ಲಿ ಆಸ್ತಿ ಸಂಬಂಧ ಸ್ವಂತ ಮಗಳೇ ಪತಿ ಜತೆ ಸೇರಿಕೊಂಡು ಅಂಗವಿಕಲ ತಂದೆ ಮೇಲೆ ಹಲ್ಲೆ ಮಾಡಿದ್ದಾಳೆ.
ರಂಗಪ್ಪ (73) ಹಲ್ಲೆಗೊಳಗಾದ ವೃದ್ಧ. ರಂಗಪ್ಪ ಪುತ್ರಿ ಗೌರಮ್ಮ, ಅಳಿಯ ಲಿಂಗರಾಜು ಹಾಗೂ ಮೊಮ್ಮಗ ಪುನೀತ್ ಹಲ್ಲೆ ಮಾಡಿದವರು.
ಈ ಹಿಂದೆ ಮಗಳಿಗೆ ರಂಗಪ್ಪ 10 ಗುಂಟೆ ಜಮೀನು ನೀಡಿದ್ದರು. ಆದರೆ, ಗೌರಮ್ಮ ಭೂಮಿಯನ್ನು ಮಾರಾಟ ಮಾಡಿಕೊಂಡಿದ್ದರು. ಬಳಿಕ ಮಗಳ ಒತ್ತಾಯಕ್ಕೆ ಮಣಿದು ಮತ್ತೆ 5 ಗುಂಟೆ ಜಮೀನು ಬರೆದುಕೊಟ್ಟಿದ್ದರು. ಇದಾದ ನಂತರ ಮಗಳು ಗೌರಮ್ಮ ಜಮೀನಿನ ಬಳಿ ಕಲ್ಲು ನೆಡುವ ವಿಚಾರದಲ್ಲಿ ಗಲಾಟೆ ನಡೆದು ರಂಗಪ್ಪ ಹಾಗೂ ಪತ್ನಿ ರೇವಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ರಂಗಪ್ಪ ರಾಮನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಡದಿ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.