ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಅಪ್ಪ ಮಗನ ಸಾವು

Accident
Published on

ಚನ್ನಪಟ್ಟಣ

ಭೀಕರ ರಸ್ತೆ ಅಪಘಾತದಲ್ಲಿ ಅಪ್ಪ ಮತ್ತು ಮಗ ಮೃತಪಟ್ಟಿರುವ ಘಟನೆ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ರಾಮಮ್ಮನ ಕೆರೆ ಏರಿ ಮೇಲೆ ಸೋಮವಾರ ಬೆಳಿಗ್ಗೆ ನಡೆದಿದೆ.

ತಾಲೂಕಿನ ಕೋಟಮಾರನಹಳ್ಳಿ ಗ್ರಾಮದ ಸಿದ್ದಯ್ಯ (60) ಮತ್ತು ಆತನ ಪುತ್ರ ಅರುಣ್ ಕುಮಾರ್ ಮೃತ ದುರ್ಧೈವಿಗಳು. ಮಗನನ್ನು ರೈಲ್ವೆ ನಿಲ್ದಾಣಕ್ಕೆ ಬಿಡಲು ಹೋಗುವಾಗ ಈ ಘಟನೆ ನಡೆದಿದೆ.

ಚನ್ನಪಟ್ಟಣದಿಂದ ಬೈರನಾಯಕ್ಕನಹಳ್ಳಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನ ಸ್ಟೇರಿಂಗ್ ಕಟ್ ಆಗಿ ಇವರ ದ್ವಿಚಕ್ರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಬ್ಬಸಕ್ಕೆ ತಂದೆ ಸ್ಥಳದಲ್ಲೇ ಮೃತಪಟ್ಟರೆ, ಮಗ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ.

ತಾಲೂಕಿನಲ್ಲಿ ಅಸಮರ್ಪಕ ಸಾರಿಗೆ ವ್ಯವಸ್ಥೆ ಇದ್ದು, ಇದರೊಂದಿಗೆ, ಇರುವ ಬಸ್ಸುಗಳು ಸಹ ಯೋಗ್ಯವಾಗಿಲ್ಲ ಎಂಬ ಆರೋಪವಿದ್ದವು. ಇದೀಗ, ಈ ಘಟನೆಗೂ ಸಹ ಸಾರಿಗೆ ನಿರ್ವಹಣೆಯ ವೈಫಲ್ಯವೇ ಕಾರಣ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net