ಮೀನು ಹಿಡಿಯಲು ತೆರಳಿದ್ದ ತಂದೆ-ಮಗ ಸಾವು

09 ylp 04 (bedti)
Published on

ಯಲ್ಲಾಪುರ: ಮೀನು ಹಿಡಿಯಲು ಬೆಡ್ತಿ ನದಿಗೆ ತೆರಳಿದ್ದ ತಂದೆ, ಮಗ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಮಂಚಿಕೇರಿ ಸಮೀಪದ ಹಳ್ಳಿಗದ್ದೆಯ ಕಲಂದರ ಫಕ್ರು ಸಾಬ್ (50) ಹಾಗೂ ಆತನ ಮಗ ತನ್ವೀರ್ ಕಲಂದರ್ ಸಾಬ್ (21) ಮೃತರು.

ಇಬ್ಬರೂ ಬೇಡ್ತಿ ನದಿಯಲ್ಲಿ ಮೀನು ಹಿಡಿಯಲು ಗುರುವಾರ ಸಂಜೆ ಹೋದವರು ಮರಳಿ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ಹುಡುಕಾಟ ಆರಂಭಿಸಿದ್ದರು. ಶುಕ್ರವಾರ ಬೆಳಗ್ಗೆ ಬೇಡ್ತಿ ನದಿ ತೀರದಲ್ಲಿ ಅವರ ಬೈಕ್, ಚಪ್ಪಲಿ ಹಾಗೂ ಮೊಬೈಲ್ ಕಂಡು ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು, ಸ್ಥಳೀಯರ ನೆರವಿನೊಂದಿಗೆ ನದಿಯಲ್ಲಿ ಶೋಧಿಸಿದಾಗ ಆಪ್ಪೆಕೋಡಿ ಬಳಿಯ ದಡದಲ್ಲಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net