

ಮಹಾಲಿಂಗಪುರ: ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟ ಇಷ್ಟೊಂದು ಏಳಿಗೆ ಮತ್ತು ಅಭಿವೃದ್ಧಿ ಸಾಧಿಸಲು ಮೂಲ ಕಾರಣ ರೈತರ ಶ್ರಮ ಎಂದು ಬಾಗಲಕೋಟೆ ಮತ್ತು ವಿಜಯಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್.ಡಿ.ದೀಕ್ಷಿತ್ ಹೇಳಿದರು.
ರನ್ನಬೆಳಗಲಿಯ ಬಸರಿಗಿಡದ ಲಕ್ಷ್ಮೀ ದೇವಸ್ಥಾನ ಮಂಟಪದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಿದ್ದಾಪುರ ತೋಟ ಹಾಲು ಉತ್ಪಾದಕರ ಸಹಕಾರಿ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಉತ್ತಮ ರಾಸುಗಳನ್ನು ಹೊಂದಲು ಅವುಗಳಿಗೆ ಪೌಷ್ಟಿಕ ಆಹಾರ ನೀಡಬೇಕು.
ನಮ್ಮ ಒಕ್ಕೂಟ ವೈದ್ಯರಲ್ಲಿ ಸಾಕಷ್ಟು ಔಷಧೋಪಚಾರಗಳಿರುತ್ತವೆ. ಅವುಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ದೇಶಕ್ಕೆ ಹೋರಾಡಿದವರ ಸ್ಮರಿಸುವುದು ನಮ್ಮ ಕರ್ತವ್ಯ
ಹಾಲು ಒಕ್ಕೂಟದ ಅಧಿಕಾರಿಗಳಾದ ಆರ್.ಎಸ್,ಚವ್ಹಾಣ್, ವಿ.ಆರ್. ನಟಕಟ್ಟಿ, ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ, ಸಂಘದ ಮುಖ್ಯ ಕಾರ್ಯನಿರ್ವಾಹಕ ಪರಶುರಾಮ ಹೊಸೂರ ಮಾತನಾಡಿದರು.
ಸಭೆಯನ್ನು ಉದ್ಘಾಟಿಸಿದ ವಿಜಯಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟದ ನಿರ್ದೇಶಕ ಸಂಜಯ್ ತಳೇವಾಡ, ಹಾಲು ಉತ್ಪಾದಕ ರೈತರಿಗೆ ಹಾಲು ಸಂಗ್ರಹಣೆಗೆ ಸ್ಟೀಲ್ ಕ್ಯಾನ್‌ಗಳನ್ನು ವಿತರಿಸಿದರು. ಹಾಲು ಒಕ್ಕೂಟದಿಂದ ಪ್ರಾರಂಭಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ರೈತರಿಗೆ ತಿಳಿಸಲಾಯಿತು.
ಎಮ್ಮೆ ಹಾಲನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಡೇರಿಗೆ ನೀಡಿ ಪ್ರಥಮ ಸ್ಥಾನ ಪಡೆದ ಮಾಲಿಂಗಪ್ಪ ಹಿಪ್ಪರಗಿ, ದ್ವಿತೀಯ ಸ್ಥಾನ ಪಡೆದ ಶಾಂತವ್ವ ಕುಂಬಾಳಿ, ತೃತೀಯ ಸ್ಥಾನ ಪಡೆದ ಸುರೇಶ ಸಿದ್ದಾಪುರ ಹಾಗೂ ಆಕಳು ಹಾಲಿನ ಪ್ರಮಾಣದಲ್ಲಿ ಪ್ರಥಮ ಸ್ಥಾನ ಗಳಿಸಿದ ಸಂಗೀತಾ ಆರೇನಾಡ, ದ್ವಿತೀಯ ಸ್ಥಾನ ನೀಡಿದ ಭೀಮಪ್ಪ ಸಿದ್ದಾಪುರ ಹಾಗೂ ತೃತೀಯ ಸ್ಥಾನ ಗಳಿಸಿದ ಶಿವಪ್ಪ ಹಿಪ್ಪರಗಿ ಅವರಿಗೆ ಅಭಿನಂದನಾ ಪತ್ರ ನೀಡುವ ಜತೆಗೆ 500 ಗ್ರಾಂ ತುಪ್ಪವನ್ನು ವಿತರಿಸಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಮುತ್ತಪ್ಪ ಹಿಪ್ಪರಗಿ ಅಧ್ಯಕ್ಷತೆ ವಹಿಸಿದ್ದರು. ರೈತರಾದ ಬಸವರಾಜ ಅರೇನಾಡ, ದಯಾನಂದ ಸಿದ್ದಾಪುರ, ಹಣಮಂತ ಗುಂಜಿಗಾವಿ, ಶ್ರೀಶೈಲ ಸಿದ್ದಾಪುರ, ಸಂತೋಷ ಹಿಪ್ಪರಗಿ, ಜಯವಂತ ಸಿದ್ದಾಪುರ.
ಶ್ರೀಕಾಂತ ಕುಂಬಾಳಿ, ನಾರಾಯಣ ಹೊಸೂರ, ಚಂದ್ರಲೇಖ ಸಿದ್ದಾಪುರ, ಸಕ್ಕೂಬಾಯಿ ಪೆದ್ದನ್ನವರ, ನಂದೀಶ ಮಲಾವಡಿ, ಲಕ್ಷ್ಮೀಬಾಯಿ ನ್ಯಾಮಗೌಡ ಮತ್ತು ಚೇತನ ಸಿದ್ದಾಪುರ ಉಪಸ್ಥಿತರಿದ್ದರು.