ದೇಶಕ್ಕೆ ಹೋರಾಡಿದವರ ಸ್ಮರಿಸುವುದು ನಮ್ಮ ಕರ್ತವ್ಯ

It is our duty to remember those who fought for the country
ರಬಕವಿ-ಬನಹಟ್ಟಿ ನಗರಸಭೆ ಕಾರ್ಯಾಲಯದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮದ ಅಂಗವಾಗಿ ನಗರಸಭೆ ವ್ಯಾಪ್ತಿಯ ಸ್ವಾತಂತ್ರೃ ಹೋರಾಟಗಾರರು ಮತ್ತು ಅವರ ಕುಟುಂಬಗಳ ಸದಸ್ಯರನ್ನು ಸನ್ಮಾನಿಸಲಾಯಿತು. ಪೌರಾಯುಕ್ತ ಜಗದೀಶ ಈಟಿ, ಡಾ.ಡಿ.ಎ.ಬಾಗಲಕೋಟ ಇದ್ದರು.
Published on

ರಬಕವಿ/ಬನಹಟ್ಟಿ: ದೇಶಕ್ಕಾಗಿ ಹೋರಾಡಿದವರನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅವರ ತ್ಯಾಗ, ಬಲಿದಾನಗಳಿಂದ ನಾವು ಇಂದು ಸ್ವತಂತ್ರ ಭಾರತದ ಪ್ರಜೆಗಳಾಗಿದ್ದೇವೆ ಎಂದು ರಬಕವಿ-ಬನಹಟ್ಟಿ ಪೌರಾಯುಕ್ತ ಜಗದೀಶ ಈಟಿ ಹೇಳಿದರು.

ರಬಕವಿ-ಬನಹಟ್ಟಿ ನಗರಸಭೆ ಕಾರ್ಯಾಲಯದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮದ ಅಂಗವಾಗಿ ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಸ್ವಾತಂತ್ರೃ ಹೋರಾಟಗಾರರು ಮತ್ತು ಅವರ ಕುಟುಂಬಗಳ ಸದಸ್ಯರಿಗೆ ಶನಿವಾರ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಭಾರತ ನಿರ್ಮಾಣದಲ್ಲಿ ಭಾಗವಹಿಸಬೇಕು.

ಭಾರತದ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸಲು, ದೇಶದ ಏಕತೆ ಮತ್ತು ಅಖಂಡತೆಗಾಗಿ ಶ್ರಮಿಸಬೇಕು ಎಂದರು.

ಸ್ವಾತಂತ್ರೃ ಹೋರಾಟಗಾರರ ಕುಟುಂಬ ಸದಸ್ಯರಾದ ಡಾ. ಡಿ. ಎ. ಬಾಗಲಕೋಟ, ಪ್ರಭು ಕೋಪರ್ಡೆ, ಗುರುಸಿದ್ದಪ್ಪ ಚನಾಳ, ಪ್ರವೀಣ ಧಬಾಡಿ, ಡಾ. ಅವಿನಾಶ ಬಡಚೀಕರ, ಮಲಕಯ್ಯ ಬಂಗಿ, ಮಲ್ಲಿಕಾರ್ಜುನ ಬುಟ್ಟನವರ, ವಿಜಯ ಕೋಪರ್ಡೆ, ಸಿದ್ರಾಮ ಚಿಂಚೋರ, ಸತ್ಯನಾರಾಯಣ ಡಾಗಾ, ಗಿರೀಶ ಹಾಸೀಲಕರ, ಶ್ರೀಕಾಂತ ಮೋಪಗಾರ, ಸರೋಜಿನಿ ಕಲಕಂಬ ಅವರನ್ನು ಸನ್ಮಾನಿಸಲಾಯಿತು. ಡಾ. ಡಿ. ಎ. ಬಾಗಲಕೋಟ, ಪ್ರಭು ಕೋಪರ್ಡೆ, ಪ್ರವೀಣ ಧಬಾಡಿ ಮಾತನಾಡಿದರು.

ಎಇಇ ರಾಘವೇಂದ್ರ ಕುಲಕರ್ಣಿ, ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಶೋಭಾ ಹೊಸಮನಿ, ರಾಜಕುಮಾರ ಹೊಸೂರ, ಭೀಮು ಬಾಡಗಿ, ಪ್ರಭಾಕರ ಮೊಳೇದ, ಶಿವಾನಂದ ಬುದ್ನಿ, ವಿದ್ಯಾ ಧಬಾಡಿ, ಗೌರಿ ಮಿಳ್ಳಿ, ರವಿ ಕೊರ್ತಿ, ಶ್ರೀದೇವಿ ಕಲಕಂಬ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net