

ಗೋಕಾಕ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ, ರೈತರು ಕೃಷಿ ಇಲಾಖೆಯ ಗುಣಮಟ್ಟದ ಬಿತ್ತನೆ ಬೀಜಗಳನ್ನು ಸಹಾಯಧನದಡಿ ಪಡೆದು ಬಿತ್ತನೆ ಕಾರ್ಯ ಕೆಗೊಳ್ಳಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಗಹ ಕಚೇರಿಯಲ್ಲಿ 2025&26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಷಿ ಇಲಾಖೆಯಿಂದ ಸರ್ಕಾರದ ಸಹಾಯಧನದಲ್ಲಿ ರೆತರಿಗೆ ನೀಡುವ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಎಲ್ಲ ರೆತರಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಖರೀದಿಗೆ ರೈತರು ಅವಸರ ಮಾಡಬಾರದು ಎಂದರು.
ಕಷಿ ಇಲಾಖೆಯ ಸಹಾಯಕ ಕಷಿ ನಿರ್ದೇಶಕ ಎಂ.ಎಂ.ನದ್ಾ ಮಾತನಾಡಿದರು. ತಹಸೀಲ್ದಾರ್ ಡಾ.ಮೋಹನ ಭಸ್ಮೆ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ಜಿಪಂ ಮಾಜಿ ಸದಸ್ಯರಾದ ಟಿ.ಆರ್. ಕಾಗಲ್, ಮಡ್ಡೆಪ್ಪ ತೋಳಿನವರ, ಶಾಸಕರ ಆಪ್ತ ಸಹಾಯಕರಾದ ಭೀಮಗೌಡ ಪೋಲಿಸಪಾಟೀಲ, ಸುರೇಶ ಸನದಿ, ಕೆಂಪಣ್ಣ ಮೆಲನ್ನವರ, ಮುಖಂಡರಾದ ಲಕ್ಷ$್ಮಣ ತಪಶಿ, ಅಶೋಕ ಗೋಣಿ, ಪ್ರಮೋದ ಜೋಶಿ ಇತರರಿದ್ದರು.