ರೈತರು ಸಿರಿಧಾನ್ಯ ಬೆಳೆಗೆ ಆದ್ಯತೆ ನೀಡಲಿ

20 Jaggu 2
Published on

ಬೆಳಗಾವಿ: ಸಿರಿಧಾನ್ಯಗಳು ಪೌಷ್ಟಿಕ ಆಹಾರದ ಆಗರವಾಗಿದ್ದು, ಔಷಧೀಯ ಗುಣಗಳಿವೆ. ರೈತರು ಸಿರಿಧಾನ್ಯ ಬೆಳೆಯಲು ಮಹತ್ವ ನೀಡಬೇಕು ಎಂದು ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಹೇಳಿದರು.

ರಾಮದುರ್ಗ ತಾಲೂಕಿನ ಚನ್ನಾಪುರ ತಾಂಡಾದ ಮಾರಿಕಾಂಬಾ ದೇವಸ್ಥಾನದಲ್ಲಿ ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರ ಮತ್ತು ಹೈದ್ರಾಬಾದ್​ನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಉಪಯೋಜನಾ ಕಾರ್ಯಕ್ರಮದ ಅಂಗವಾಗಿ ಸಿರಿಧಾನ್ಯ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಕುರಿತು ಈಚೆಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಖಿಲ ಭಾರತೀಯ ಸಮನ್ವಯ ಶೇಂಗಾ ಸಂಶೋಧನಾ ಯೋಜನೆಯ ಹಿರಿಯ ವಿಜ್ಞಾನಿ (ಬೇಸಾಯ ಶಾಸ) ಡಾ.ಬಸವರಾಜ ಏಣಗಿ ಮಾತನಾಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಮೇವು ಬೆಳೆಗಳ ಯೋಜನೆ ೇತ್ರ ವಿಭಾಗದ ಪ್ರಾಧ್ಯಾಪಕ ಡಾ.ನಾಗಪ್ಪ ಗೊರವನಕೊಪ್ಪ, ಚನ್ನಾಪುರ ಪ್ರಗತಿಪರ ರೈತ ಶಿವಪ್ಪ ನೀಲಾಕರಿ ಮಾತನಾಡಿದರು.

ರಾಮದುರ್ಗ ಕೃಷಿ ಇಲಾಖೆಯ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಗೋವಿಂದರೆಡ್ಡಿ ಜಾಯನ್ನವರ ಬೀಜೋಪಚಾರದ ಮಹತ್ವ ಮತ್ತು ಬೀಜೋಪಚಾರದ ಪ್ರಾತ್ಯಕೆ ತೋರಿಸಿದರು. ಮೌಲ್ಯವರ್ಧಿತ ಸಿರಿಧಾನ್ಯ ಆಹಾರ ಉತ್ಪನ್ನ ಪ್ರದರ್ಶಿಸಲಾಯಿತು. ಸಿರಿಧಾನ್ಯಗಳ ಬೇಸಾಯ ಕ್ರಮ, ಮೌಲ್ಯವರ್ಧನೆ ಕುರಿತು ಕರಪತ್ರ/ಹಸ್ತ ಪತ್ರಿಕೆಗಳನ್ನು ಕೃಷಿಕರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 200ಕ್ಕೂ ರೈತರು ಪಾಲ್ಗೊಂಡಿದ್ದರು.

ನಂದಿಹಾಳ ಗ್ರಾಪಂ ಅಧ್ಯಕ್ಷ ಹನುಮಂತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಬೇಸಾಯಶಾಸದ ವಿಜ್ಞಾನಿ ಜಿ.ಬಿ. ವಿಶ್ವನಾಥ, ಗ್ರಾಪಂ ಸದಸ್ಯ ದಾನಪ್ಪ ಲಮಾಣಿ, ರಾಮದುರ್ಗ ಸಹಾಯಕ ಕೃಷಿ ನಿರ್ದೇಶಕ ಎಸ್​.ಎಫ್​.ಬೆಳವಟಿಗಿ ಉಪಸ್ಥಿತರಿದ್ದರು. ಕೆವಿಕೆ ವಿಜ್ಞಾನಿ ಡಾ.ಎಸ್​.ಎಸ್​.ಹಿರೇಮಠ ಸ್ವಾಗತಿಸಿದರು. ರಾಮದುರ್ಗ ಕೃಷಿ ಇಲಾಖೆಯ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರವಿ ಲಮಾಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net