ಯೂರಿಯಾ ಗೊಬ್ಬರಕ್ಕಾಗಿ ಕಿ.ಮೀ. ವರೆಗೂ ರೈತರ ಸರದಿ

MND Gobbara
Published on

ಮುಂಡಗೋಡ: ಪಟ್ಟಣದ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಬುಧವಾರ ಯೂರಿಯಾ ಗೊಬ್ಬರ ಖರೀದಿಸಲು ರೈತರು ಮುಗಿಬಿದ್ದ ಘಟನೆ ನಡೆದಿದೆ.
ಕಳೆದ ಕೆಲವು ದಿನಗಳಿಂದ ತಾಲೂಕಿನ ರೈತರು ಯೂರಿಯಾ ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದರು. ಬುಧವಾರ ಮಾರ್ಕೆಟಿಂಗ್ ಸೊಸೈಟಿಗೆ ಯೂರಿಯಾ ಗೊಬ್ಬರ ಬಂದಿದೆ ಎಂಬ ಸುದ್ದಿ ತಿಳಿದು ರೈತರು ಸರದಿ ಸಾಲಲ್ಲಿ ಗೊಬ್ಬರ ಖರೀದಿಸಲು ನಿಂತರು.
ಆದರರ, ಸೊಸೈಟಿಯಲ್ಲಿ 550 ಚೀಲ ಮಾತ್ರ ದಾಸ್ತಾನಿತ್ತು. ಸೊಸೈಟಿಯವರು ಒಬ್ಬರಿಗೆ ಒಂದು ಚೀಲ ಮಾತ್ರ ಗೊಬ್ಬರ ನೀಡಿದರು.
ಉಳಿದ ರೈತರಿಗೆ ನಾಳೆ ದಾಸ್ತಾನು ಬಂದ ನಂತರ ಕೋಡುತ್ತೇವೆ ಎಂದು ತಿಳಿಸಿದರು. ಸದ್ಯ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಿದ್ದು, ಈ ಕುರಿತು ಹಿರಿಯ ಅಧಿಕಾರಿಗಳು ಗಮನ ಹರಿಸಿ ರೈತರಿಗೆ ಯೂರಿಯಾ ಗೊಬ್ಬರ ಕೊಡಿಸುವ ವ್ಯವಸ್ಥೆ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net