ನಿರಂತರ ವಿದ್ಯುತ್ ಗೆ ಆಗ್ರಹಿಸಿ ರೈತರ ಪ್ರತಿಭಟನೆ

Rmgm-Ph-02-Raitha Sanga Prathibatane Dc Office Police Bariked Police Jatapati-Rmgm -19-10-2023
Published on

ರಾಮನಗರ: ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಏಳು ಗಂಟೆ ವಿದ್ಯುತ್ ನೀಡಬೇಕು ಎಂದು ಒತ್ತಾುಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಛೇರಿ ಎದರು ಗುರುವಾರ ಪ್ರತಿಭಟನೆ ನಡೆಸಿದರು.

ಮಳೆ ಇಲ್ಲದೆ ಬರಗಾಲ ತಾಂಡವಾಡುತ್ತಿದೆ. ಇಂತಹ ಸಂಧರ್ಭದಲ್ಲಿ ಕೃ ಪಂಪ್‌ಸೆಟ್ ಅವಲಂಭನೆುಂದ ತರಕಾರಿ, ರೇಷ್ಮೆ, ಹೈನುಗಾರಿಕೆ ಮೇವು, ಬಾಳೆ ಸೇರಿದಂತೆ ತೋಟಗಾರಿಕೆ ಫಸಲು ಬೆಳೆದು ಜಿಲ್ಲೆಯ ಸಾವಿರಾರು ರೈತರು ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಸಂಧರ್ಭದಲ್ಲಿ ರೈತರನ್ನು ಸರ್ಕಾರ ಕಡೆಗಣಿಸಿದ್ದು ದಿನಕ್ಕೆ ಎರಡು ಗಂಟೆ ವಿದ್ಯುತ್ ನೀಡಿ ರೈತ ಫಸಲು ಬೆಳೆಯದಂತೆ ಮಾಡಿದೆ.

ನಿರಂತರವಾಗಿ ರೈತರಿಗೆ ಹಗಲಿನ ವೇಳೆಯಲ್ಲಿ 7 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಬರಬೇಕು ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಜಿಲ್ಲಾಧಿಕಾರಿಗಳು ಮನವಿ ಆಲಿಸಲು ಬರಬೇಕು, ರೈತರ ಕುಂದು ಕೊರತೆ ಸಭೆ ಪ್ರತೀ ತಿಂಗಳು ಕರೆಯಬೇಕು ಎಂದು ಪಟ್ಟು ಹಿಡಿದು ಧರಣಿ ಕೂತು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಬೆಸ್ಕಾಂ ಇಇ ನಾಗರಾಜು ಮಾಗಡಿ, ಕನಕಪುರ ತಾಲೂಕಿನ ಬೆಸ್ಕಾಂ ಅಧಿಕಾರಿಗಳು ಆಗಮಿಸಿ ರೈತರಿಂದ ಸಮಸ್ಯೆ ಕೇಳಿದರು.

ಬ್ಯಾರಿಕೇಟ್ ಕಿತ್ತೆಸೆದ ರೈತರು: ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ಬಂದ ರೈತರನ್ನು ಜಿಲ್ಲಾಧಿಕಾರಿಗಳ ಕಚೇರಿ ಸಮೀಪದಲ್ಲೇ ಬ್ಯಾರಿಕೇಡ್ ಅಳವಡಿಸಿ ತಡೆಯಲಾುತು. ಈ ವೇಳೆ ರೈತರು ಪೋಲೀಸರ ಜೊತೆ ಕೆಲವೊತ್ತು ಮಾತಿನ ಚಕಮಕಿ ನಡೆಸಿದರು. ರಾಮನಗರ ಪುರ ಪೋಲೀಸ್ ಠಾಣೆ ಸಬ್ ಇನ್ಸ್‌ಸ್ಪೆಕ್ಟರ್ ಆಕಾಶ್ ಕಛೇರಿ ಆವರಣಕ್ಕೆ ಬಿಡಲು ಆಗುವುದಿಲ್ಲ ಇಲ್ಲೇ ಮನವಿ ಸಲ್ಲಿಸಿ ಎಂದರು.

ಇದರಿಂದ ಕೆರಳಿ ರೈತರು ನಾವು ಬಿಸಿಲಿನಲ್ಲಿ ನಿಂತು ಮನವಿ ನೀಡಬೇಕೆ ಜಿಲ್ಲಾಧಿಕಾರಿಗಳು ರೈತರ ಕಷ್ಟ ಸುಖ ಕೇಳುವುದಿಲ್ಲವೇ ನಾವಿದ್ದರೆ ಜಿಲ್ಲಾಧಿಕಾರಿ ಎಂದು ಪೋಲೀಸರು ಹಾಕಿದ್ದ ಬ್ಯಾರಿಕೇಡ್ ಕಿತ್ತೆಸೆದು ಪೋಲೀಸರನ್ನು ದೂಡಿ ಒಳನುಗ್ಗಿ ಕಛೇರಿ ಆವರಣದಲ್ಲಿ ಕೂತು ಪ್ರತಿಭಟಿಸಿದರು.

ಒಂದು ಗಂಟೆಗೂ ಹೆಚ್ಚು ಕಾಲ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ರೈತರಿಂದ ಸಮಸ್ಯೆ ಆಲಿಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ರೈತ ಮುಖಂಡರಿಗೆ ನೀಡಿದರು ಈ ವೇಳೆ ಹಲವು ರೈತರು ಕಂದಾಯ ಇಲಾಖೆಯಲ್ಲಿ ಆಗಿರುವ ಸಮಸ್ಯೆ, ಚನ್ನಪಟ್ಟಣ ತಹಸೀಲ್ದಾರ್, ಗ್ರಾಮಲೆಕ್ಕಾಧಿಕಾರಿ ಒಬ್ಬರ ಬಗ್ಗೆ ದೂರು ಹೇಳಿದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ವಿಭಾಗೀಯ ಅಧ್ಯಕ್ಷ ಕೆ. ಮಲ್ಲಯ್ಯ, ಕೆ.ಎನ್.ರಾಜು, ಮುನಿರಾಜು, ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ರಾಮೇಗೌಡ, ಮುಖಂಡರುಗಳಾದ ಹೆಚ್.ಸಿ. ಕೃಷ್ಣಯ್ಯ, ಅಂಕನಹಳ್ಳಿ ಪುಟ್ಟಲಿಂಗೇಗೌಡ, ಡಣಾಯಕನಪುರದ ಶಿವಲಿಂಗಯ್ಯ, ರತ್ನಮ್ಮ, ಲೋಕೇಶ್, ಜಯಕೃಷ್ಣ, ಚಂದ್ರಶೇಖರ್, ಶಿಲ್ಪ, ಪುಟ್ಟಸ್ವಾಮಯ್ಯ, ಗುರುಲಿಂಗಯ್ಯ, ರಾಮಕೃಷ್ಣಪ್ಪ, ಬೋರೇಗೌಡಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net