ಮೊಳಕೆ ಬೀಜ ಬಿತ್ತನೆಗೆ ಮುಂದಾದ ಕೃಷಿಕರು

bittane
ಬಿತ್ತನೆ
Published on

ಬ್ರಹ್ಮಾವರ: ತುಂಡು ಭೂಮಿಗಳನ್ನು ಹೊಂದಿದ ಕರಾವಳಿ ಜಿಲ್ಲೆಯಲ್ಲಿ ಭತ್ತ ಬೆಳೆಯಲು ಸಾಂಪ್ರದಾಯಿಕ ನಾಟಿ, ಶ್ರೀಪದ್ಧತಿ, ಯಂತ್ರ ನಾಟಿ ಇದೆಲ್ಲವೂ ವಾಯವಾಗುತ್ತಿದ್ದು, ಇದೀಗ ಕೃಷಿಕರು ಭತ್ತದ ಬೀಜವನ್ನು ಮೊಳಕೆ ವಾಡಿ ಗದ್ದೆಯಲ್ಲಿ ನೇರವಾಗಿ ಬಿತ್ತುವ ನಾಟಿಗೆ ಮೊರೆ ಹೋಗುತ್ತಿದ್ದಾರೆ.

ವರ್ಷದಿದಂದ ವರ್ಷಕ್ಕೆ ಕೂಲಿ ಕಾರ್ಮಿಕರ ಸಮಸ್ಯೆ ಮತ್ತು ಮಣ್ಣಿನ ಫಲವತ್ತತೆ ಇಳಿಮುಖ, ಕಾಡು ಪ್ರಾಣಿಗಳು, ನವಿಲು, ಜಿಂಕೆಗಳ ಹಾವಳಿ, ಸಮಯಕ್ಕೆ ಸರಿಯಾಗಿ ಬಾರದ ಮಳೆ, ನದಿತೀರದ ಕೃಷಿಕರಿಗೆ ಪ್ರವಾಹದ ಭೀತಿ ಏರುತ್ತಿರುವ ರಸಗೊಬ್ಬರ ಬೆಲೆ ಇದೆಲ್ಲವೂ ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರ ಬವಣೆಯಾಗಿದೆ.

ದೂರ ದೂರದಲ್ಲಿ ತುಂಡು ಭೂಮಿಯನ್ನು ಹೊಂದಿದ ಸಣ್ಣ ರೈತರು ಟಿಲ್ಲರ್ ಖರೀದಿ, ಬಾವಿ ತೋಡಲು, ವಿದ್ಯುತ್ ಪಡೆಯಲು, ರೈತ ಸಂಪರ್ಕ ಕೇಂದ್ರದಿಂದ ಸರ್ಕಾರದ ಅನೇಕ ಯೋಜನೆಯಲ್ಲಿ ಸಿಗುವ ಬಿತ್ತನೆ ಬೀಜ, ಸುಣ್ಣ, ನೀರಿನ ಪೈಪ್ ಇನ್ನಿತರ ಸಾಮಗ್ರಿ ತರಲು ಸಣ್ಣ ರೈತರು ತೀರಾ ಸಂಕಷ್ಟ ಪಡುತ್ತಾರೆ.

ಇಷ್ಟೆಲ್ಲ ವಾಡಿ ಕಟಾವು ವಾಡಿ ಬೆಳೆ ಮನೆಗೆ ಬರುವಾಗ ಖರ್ಚು ವಾಡಿದ ಅರ್ಧದಷ್ಟು ಕೂಡಾ ಹಣ ಸಿಗುವುದಿಲ್ಲದ ಕಾರಣ ಪರಂಪರಾಗತವಾಗಿ ಹಿರಿಯರಿಂದ ಬಂದ ಭೂಮಿಯನ್ನು ಬಂಜರು ಅಥವಾ ಹಡಿಲು ಬಿಡಲು ಮನಸ್ಸಿಲ್ಲದೆ ಈ ವರ್ಷ ಅನೇಕ ಕಡೆ ಕೃಷಿಕರು ಮೊಳಕೆ ಬೀಜ ಬಿತ್ತನೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net