ಕರಡಿ ದಾಳಿಗೆ ರೈತರಿಗೆ ಗಾಯ

Published on

ಚಿಕ್ಕಬಳ್ಳಾಪುರ: ತಾಲೂಕಿನ ಗುರುಕುಲನಾಗೇನಹಳ್ಳಿಯಲ್ಲಿ ಕರಡಿ ದಾಳಿಗೆ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ನರಸಿಂಹಪ್ಪ (48) ಹಾಗೂ ಕೃಷ್ಣಪ್ಪ (51) ಗಾಯಾಳು. ಇಬ್ಬರನ್ನೂ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನರಸಿಂಹಪ್ಪ ಅವರ ಮುಖ, ತಲೆ, ಕಿವಿ, ಕಣ್ಣು ಸೇರಿ ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿವೆ. ಕೃಷ್ಣಪ್ಪ ಅವರ ಕೈಯನ್ನು ಕರಡಿ ಬಲವಾಗಿ ಕಚ್ಚಿದೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಗ್ರಾಮದ ಹೊರ ವಲಯದ ಟೊಮ್ಯಾಟೊ ತೋಟದಲ್ಲಿ ನರಸಿಂಹಪ್ಪ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಹಿಂಬದಿಯಿಂದ ಕರಡಿ ದಾಳಿ ಮಾಡಿ ಹಲ್ಲೆ ನಡೆಸಿದೆ. ಕೊನೆಗೆ ಗಾಯಾಳು ತಟಸ್ಥವಾಗಿ ನೆಲಕ್ಕೆ ಬಿದ್ದ ಬಳಿಕ ಮತ್ತೊಂದು ತೋಟದಲ್ಲಿದ್ದ ಕೃಷ್ಣಪ್ಪ ಮೇಲೆ ಮುಗಿ ಬಿದ್ದಿದೆ. ಜೋರಾಗಿ ಕಿರುಚುತ್ತಿದ್ದಂತೆ ಸ್ಥಳಿಯರು ಮಾರಕಾಸ್ತ್ರಗಳೊಂದಿಗೆ ಓಡಿ ಬಂದಿದ್ದು ಕರಡಿ ಓಡಿಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net