

ಹುಬ್ಬಳ್ಳಿ: ರೈತ ವಿರೋಧಿ ಮಸೂದೆ ಜಾರಿ ವಿರೋಧಿಸಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ರಾಜ್ಯ ಸರ್ಕಾರ ರೈತ ಹೋರಾಟಗಾರರ ಫೋನ್ ಕದ್ದಾಲಿಕೆ ಮಾಡುತ್ತಿದ್ದೆ ಎಂದು ಮಾಜಿ ಸಚಿವ ಎನ್.ಎಚ್. ಕೋನರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ನಾವು ದೂರವಾಣಿ ಮೂಲಕ ಚರ್ಚಿಸಿದ ಹೋರಾಟದ ವಿಷಯಗಳು ಪೊಲೀಸರಿಗೆ ಹೇಗೆ ತಿಳಿಯುತ್ತಿವೆ? ಇಲ್ಲಿ ರೈತ ಹೋರಾಟಗಾರರ ಫೋನ್ ಟ್ಯಾಪ್ ಆಗ್ತಿದೆ. ರಾಜ್ಯ ಸರ್ಕಾರ ರೈತ ಹೋರಾಟ ಹತ್ತಿಕ್ಕುವ ಹುನ್ನಾರ ನಡೆಸುತ್ತಿದೆ ಎಂದು ಕಿಡಿಕಾರಿದರು.
ನಾನು ಕೂಡ ಮಾಜಿ ಶಾಸಕ. ಇವರೇನು ಮಾಡ್ತಾರೆ ಎಂಬುದು ಎಲ್ಲವೂ ಗೊತ್ತಿದೆ. ಸರ್ಕಾರ ಫೋನ್ ಕದ್ದಾಲಿಕೆ ಬಿಡ ಬೇಕು ಎಂದು ಎಚ್ಚರಿಸಿದ ಕೋನರೆಡ್ಡಿ, ಇದು ಪ್ರಜಾಪ್ರಭುತ್ವ ದೇಶ. ಮೊದಲು ಇದನ್ನು ಅರಿಯಬೇಕು ಎಂದು ಚುವುಟಿದರು.