ಶನಿವಾರ ಕೃಷಿ ವಿಶ್ವ ವಿದ್ಯಾಲಯದ ಜಿಕೆವಿಕೆಯಲ್ಲಿ ರೈತ ಸಂತೆ

gkvk
Published on

ಬೆಂಗಳೂರು: ಕೃಷಿ ವಿಶ್ವ ವಿದ್ಯಾಲಯವು ಅಭಿವೃದ್ಧಿ ಪಡಿಸಿರುವ ಕೃಷಿ ಉಪಕರಣಗಳು, ನೂತನ ತಂತ್ರಜ್ಞಾನಗಳನ್ನು ಪರಿಚಯಿಸುವುದು ಹಾಗೂ ಬಿತ್ತನೆ ಬೀಜ ಮತ್ತು ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಇಂದು (ಶನಿವಾರ) ಒಂದು ದಿನದ ರೈತ ಸಂತೆಯನ್ನು ಏರ್ಪಡಿಸಿದೆ.

ಜಿ.ಕೆ.ವಿ.ಕೆ ಗಣಪತಿ ದೇವಸ್ಥಾನದ ಹತ್ತಿರ ಬೆಳಗ್ಗೆ 7 ರಿಂದ ಸಂಜೆ 4ರವರೆಗೆ ರೈತ ಸಂತೆ ನಡೆಯಲಿದ್ದು, ಸಿರಿಧಾನ್ಯದ ಉತ್ಪನ್ನಗಳು, ತೋಟಗಾರಿಕಾ ಹಣ್ಣುಗಳು ಮತ್ತಿತರ ಉತ್ಪನ್ನಗಳು, ಜೇನುತುಪ್ಪ, ಬೆಲ್ಲ, ಧಾನ್ಯ, ಸಸ್ಯಗಳು, ಜೈವಿಕ ಗೊಬ್ಬರ, ಕೃಷಿಗೆ ಸಂಬಂಧಪಟ್ಟ ಯಂತ್ರೋಪಕರಣಗಳು ಸೇರಿದಂತೆ ವಿವಿದ ಪದಾರ್ಥಗಳು ಮಾರಾಟಕ್ಕೆ ಲಭ್ಯವಿದ್ದು, ಸಾರ್ವಜನಿಕರು ಹಾಗೂ ರೈತರು ಇಬ್ಬರನ್ನು ಗಮನದಲ್ಲಿರಿಸಿಕೊಂಡು ಈ ರೈತ ಸಂತೆ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net