

ಇಟಗಿ: ರೈತರು ಆರ್ಥಿಕವಾಗಿ ಸಬಲರಾಗಲು ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಗಳ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಸಮೀಪದ ದೇವಲತ್ತಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಹಕಾರ ೇತ್ರದ ಪ್ರಗತಿಗೆ ಕೇಂದ್ರ ಸರ್ಕಾರ ಹಲವಾರು ಜನಪರ ಕಾರ್ಯಕ್ರಮ ರೂಪಿಸಿದೆ. ಸಹಕಾರಿ ಸಂಗಳಿಂದ ರೈತರಿಗೆ ಸಾಲ ಸೌಲಭ್ಯಗಳಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು. ದೇವಲತ್ತಿ ಸಹಕಾರಿ ಸಂದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ ಮಾತನಾಡಿ, ದೇವಲತ್ತಿ ಸಹಕಾರಿ ಸಂಕ್ಕೆ ಒಟ್ಟು 15 ಲ ರೂ. ಮೊತ್ತದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಸಂದ ಸದಸ್ಯರಿಗೆ 1.30 ಕೋಟಿ ರೂ. ಸಾಲ ಮಂಜೂರಾಗಿದೆ. ಗ್ರಾಹಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಂದ ಅಧ್ಯ ಶಿವಾಜಿ ಇಟಗಿ, ಸಂಸ್ಥಾಪಕ ಕಾರ್ಯದರ್ಶಿ ಮಹಾಲಿಂಗ ಇಟಗಿ, ಜಿ.ಕೆ.ಹೊಸುರ, ಜ್ಯೋತಿಬಾ ಭರಮಪ್ಪನವರ, ರಾಜಶೇಖರ ಕಮ್ಮಾರ, ಮಹಾದೇವ ಸಿಮಾನಗೌಡ್ರು, ನಾಗೇಶ ಅಗಸಿಮನಿ, ಅಡಿವೆಪ್ಪ ಅಕ್ಕಿ, ಶಿವಾನಂದ ಅಗಸಿಮನಿ, ಕಲ್ಲಪ್ಪ ದೇಶನೂರ, ಹನುಮಂತ ಠಕ್ಕೆಕರ, ಶಂಕರಗೌಡ ಪಾಟೀಲ, ನಿಂಗಪ್ಪ ಠಕ್ಕೆಕರ, ಸಾತಪ್ಪ ಮಾಜೇಲಿ, ಮಂಜುನಾಥ ಇಟಗಿ ಇತರರಿದ್ದರು.