

ಬದಿಯಡ್ಕ: ರೋಟರಿ ಬದಿಯಡ್ಕದ ನೇತೃತ್ವದಲ್ಲಿ ಕೃಷಿಕರ ದಿನಾಚರಣೆ ಶನಿವಾರ ಬೈಕುಂಜೆಯಲ್ಲಿ ನಡೆಯಿತು. ಹಿರಿಯ ಪ್ರಗತಿಪರ ಕೃಷಿಕ, ಸಾಮಾಜಿಕ ಮುಂದಾಳು ಶಂಕರನಾರಾಯಣ ಭಟ್ ಬೈಕುಂಜ ಅವರ ನಿವಾಸದಲ್ಲಿ ಗೌರವಾರ್ಪಣಾ ಕಾರ್ಯಕ್ರಮ ಜರುಗಿತು. ರೋಟರಿ ಬದಿಯಡ್ಕ ಘಟಕದ ಅಧ್ಯಕ್ಷ ಬಿ.ಕೇಶವ ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಬಿ.ರಾಧಾಕೃಷ್ಣ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ರೋಟರಿ ಕಾರ್ಯದರ್ಶಿ ರಮೇಶ್ ಆಳ್ವ ಕಡಾರ್ ಸ್ವಾಗತಿಸಿ, ಪಿ.ರಾಘವೇಂದ್ರ ಅಮ್ಮಣ್ಣಾಯ ವಂದಿಸಿದರು.