ನೇಣುಬಿಗಿದುಕೊಂಡು ರೈತ ಆತ್ಮಹತ್ಯೆ

Published on

ಗುಂಡ್ಲುಪೇಟೆ:

ಬೆಳೆನಷ್ಟ ಹಾಗೂ ಸಾಲಬಾಧೆಯಿಂದ ಬೇಸತ್ತ ರೈತರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೇಗೂರು ಹೋಬಳಿ ದೇಪೇಗೌಡನ ಹೊಸಪುರ ಗ್ರಾಮದ ಶಿವಣ್ಣೇಗೌಡ(50) ಆತ್ಮಹತ್ಯೆ ಮಾಡಿಕೊಂಡವರು. 5 ಎಕರೆ ಜಮೀನು ಹೊಂದಿರುವ ಶಿವಣ್ಣೇಗೌಡ ಅವರು ಜೋಳ, ಸೂರ್ಯಕಾಂತಿ, ಹತ್ತಿ, ಅರಿಶಿಣ, ಈರುಳ್ಳಿ, ಬೀಟ್‌ರೋಟ್ ಬೆಳೆಗಳನ್ನು ಬೆಳೆದಿದ್ದರು. ಇತ್ತೀಚೆಗೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಎಲ್ಲ ಬೆಳೆಗಳೂ ನಾಶವಾಗಿದ್ದರಿಂದ ಬೇಸತ್ತಿದ್ದರು. ಬ್ಯಾಂಕ್‌ಗೆ ಟ್ರ್ಯಾಕ್ಟರ್ ಕಂತು ಹಾಗೂ ಸ್ವಸಹಾಯ ಸಂಘಗಳಲ್ಲಿ ಪಡೆದಿದ್ದ ಸಾಲ ಕಟ್ಟಲು ಸಮಸ್ಯೆ ಎದುರಾಗಿತ್ತು. ಭಾನುವಾರ ಸಂಜೆ ಜಮೀನಿನಿಂದ ಮನೆಗೆ ಬಂದವರು ರಾತ್ರಿ 8 ಗಂಟೆ ವೇಳೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ತಹಸೀಲ್ದಾರ್ ಟಿ.ರಮೇಶ್ ಬಾಬು, ಬೇಗೂರು ನಾಡಕಚೇರಿ ಕಂದಾಯಾಧಿಕಾರಿ ಮಹದೇವಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net