

ಬೆಂಗಳೂರು: ಬ್ಯಾಂಕ್ವೆಟ್ ಹಾಲ್ನಲ್ಲಿ ರೈತ ಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ತಾವೇ ಖುದ್ದು ಇಷ್ಟಪಟ್ಟು ರೈತಗೀತೆ ಹಾಡಿಸಿದರು!
ಏನ್ರೋ ರೈತ ಗೀತೆ ಹೇಳ್ತಿರೇನು? ಇದ್ದೀರಾ ಎಲ್ಲ ಎಂದು ಕೇಳಿದರು. ಸಿಎಂ ಬೇಡಿಕೆಗೆ ಸ್ಪಂದಿಸಿದ ಕಲಾವಿದರು ರೈತಗೀತೆ ಹಾಡಿದರು. ರೈತಗೀತೆ ಪೂರ್ಣ ಮುಗಿಯುವವರೆಗೂ ಸಿಎಂ ನಿಂತೇ ಇದ್ದರು. ತರುವಾಯ ಮಾತು ಮುಂದುವರಿಸಿದರು.
ಸಮಾರಂಭ ಉದ್ಧೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾದ ಹೂ, ಹಣ್ಣು ಬೆಳೆಗಾರರಿಗೆ 1 ಹೆಕ್ಟೇರ್ಗೆ 10 ಸಾವಿರ ರೂ. ಪರಿಹಾರ ನೀಡಲಾಗಿದೆ. ದೇಶದಲ್ಲಿ ಮೊದಲಬಾರಿಗೆ ಕೊವೀಡ್ ನಿಂದ ನಿಧನರಾದ ಕುಟುಂಬಕ್ಕೆ ಒಂದು ಲಕ್ಷ ನೀಡಿದ್ದೇವೆ. ಉತ್ತಮವಾದ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದರು.
ನಮ್ಮದು ರೈತ ಪರ ಸರ್ಕಾರ
ಶಿಕ್ಷಣ, ಆರೋಗ್ಯ ಮತ್ತು ಕೃಷಿ ನಮ್ಮ ಸರ್ಕಾರ ಆದ್ಯತೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸಹಕಾರಿ ಕ್ಷೇತ್ರದ ಕಾರ್ಯ ಶ್ಲಾಘನೀಯ ಎಂದು ಸಿಎಂ ಬಿಎಸ್ವೈ, ಕೋವಿಡ್ ನಿಧಿಗಾಗಿ ಸಹಕಾರ ಸಂಘಗಳಿಂದ 58 ಕೋಟಿ ರೂ. ದೇಣಿಗೆಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. 30.26 ಲಕ್ಷ ರೈತರಿಗೆ ಸಾಲ ನೀಡುವ ಗುರಿ ಸರ್ಕಾರದ್ದು. ಸ್ರ್ತಿ ಶಕ್ತಿ ಸಂಘಗಳಿಗೆ 400 ಕೋಟಿ ಸಾಲ ವಿತರಣೆಯ ಗುರಿ ಹೊಂದಲಾಗಿದೆ. ಅಭಿವೃದ್ಧಿ ಆಗಿಲ್ಲ ಎನ್ನುವವರಿಗೆ ಈ ಅಂಕಿ ಅಂಶಗಳೇ ಉತ್ತರ ಎಂದು ಹೇಳಿದರು. ಇದೆ ವೇಳೆ ಕೋವಿಡ್ ಹೋಗಿದೆ ಎನ್ನುವ ಭ್ರಮೆ ಬೇಡ. ಎಲ್ಲರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದರು.