More

    ಸ್ಮಾರ್ಟ್​ಫೋನಲ್ಲಿ ಯೋಗ ತರಬೇತಿ : ಬಂದಿದೆ ಎಂಯೋಗ ಆ್ಯಪ್

    ನವದೆಹಲಿ : ಭಾರತದ ಸನಾತನ ಪರಂಪರೆಯಾದ ಯೋಗವನ್ನು ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಜಗತ್ತಿನಾದ್ಯಂತದ ಆಸಕ್ತರಿಗೆ ತಲುಪಿಸುವ ಒಂದು ವಿನೂತನ ಪ್ರಯತ್ನವು ಅಂತರಾಷ್ಟ್ರೀಯ ಯೋಗ ದಿನವಾದ ಇಂದು ಆರಂಭವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ) ಮತ್ತು ಭಾರತದ ಆಯುಷ್​ ಮಂತ್ರಾಲಯ ಜಂಟಿಯಾಗಿ ರೂಪಿಸಿರುವ ಎಂಯೋಗ(WHO mYoga) ಆ್ಯಪ್​ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ.

    “ಡಬ್ಲ್ಯೂಎಚ್​ಒ ಸಹಯೋಗದಲ್ಲಿ ಭಾರತ ಮತ್ತೊಂದು ಮುಖ್ಯ ಹೆಜ್ಜೆ ಇಟ್ಟಿದೆ. ಜಗತ್ತಿನ ವಿವಿಧೆಡೆಯ ಜನರಿಗಾಗಿ ವಿಭಿನ್ನ ಭಾಷೆಗಳಲ್ಲಿ ಯೋಗ ತರಬೇತಿ ವಿಡಿಯೋಗಳನ್ನು ಹೊಂದಿರುವ ಎಂಯೋಗ ಆ್ಯಪ್​ಗೆ ಚಾಲನೆ ನೀಡುತ್ತಿದ್ದೇವೆ. ಇದು ನಮ್ಮ ‘ಒಂದು ವಿಶ್ವ, ಒಂದು ಆರೋಗ್ಯ’ ಎಂಬ ಧ್ಯೇಯವನ್ನು ಸಾಧಿಸುವಲ್ಲಿ ಸಹಾಯ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ.

    ಇದನ್ನೂ ಓದಿ: ವಿದ್ಯುತ್​ ಶಾಕ್​ನಿಂದ ಹಸು ಸಾವು: ರೈತನಿಗೆ 90 ಸಾವಿರ ರೂ. ಪರಿಹಾರ ನೀಡಲು ನಿರ್ದೇಶನ

    ಯೋಗ ತರಬೇತಿ ಮತ್ತು ಅಭ್ಯಾಸ ವರ್ಗಗಳನ್ನು ಒದಗಿಸುವ ಡಬ್ಲ್ಯೂಎಚ್​ಒ ಎಂಯೋಗ ಆ್ಯಪನ್ನು 12 ರಿಂದ 65 ವರ್ಷಗಳವರೆಗಿನ ಜನರು ನಿತ್ಯ ಯೋಗ ಸಂಗಾತಿಯನ್ನಾಗಿ ಬಳಸಬಹುದು. ಇದನ್ನು ವೈಜ್ಞಾನಿಕ ಸಾಹಿತ್ಯ ಮತ್ತು ಅಂತರರಾಷ್ಟ್ರೀಯ ತಜ್ನರೊಂದಿಗೆ ಸಮಾಲೋಚನೆ ಮಾಡಿ ರೂಪಿಸಲಾಗಿದೆ ಎಂದು ಡಬ್ಲ್ಯೂಎಚ್​ಒ ತಿಳಿಸಿದೆ.

    ಸ್ಮಾರ್ಟ್​ ಫೋನ್​ ಮೂಲಕ ಒಂದು ಟಚ್​ನಿಂದ ಗುಣಮಟ್ಟದ ಯೋಗವನ್ನು ಅಭ್ಯಾಸ ಮಾಡಲು ಅವಕಾಶ ನೀಡುವ ಎಂಯೋಗ, ಸದ್ಯಕ್ಕೆ, ಹಿಂದಿ, ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಲಭ್ಯವಿದೆ. ಇನ್ನು ಮುಂದೆ ಅನ್ಯ ಹಲವಾರು ಭಾಷೆಗಳಲ್ಲಿ ಇದರ ಸೇವೆ ಲಭ್ಯವಾಗುವಂತೆ ಪ್ರಯತ್ನ ನಡೆಯುತ್ತಿದೆ. ಆ್ಯಂಡ್ರಾಯ್ಡ್​ ಬಳಕೆದಾರರು ಈ ಆ್ಯಪ್​ಅನ್ನು ಗೂಗಲ್ ಪ್ಲೇ ಸ್ಟೋರ್​ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. (ಏಜೆನ್ಸೀಸ್)

    VIDEO | ಯೋಗ ದಿನ : 18,000 ಅಡಿ ಎತ್ತರದಲ್ಲಿ ಸೂರ್ಯನಮಸ್ಕಾರ

    VIDEO | ಮೆಟ್ರೋದಲ್ಲಿ ಮಂಗ! ಸಭ್ಯವಾಗಿ ಸೀಟಲ್ಲಿ ಕೂತು ಪ್ರಯಾಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts