More

    ಉದ್ಯೋಗಕ್ಕಾಗಿ ಇಂಗ್ಲಿಷ್ ಕಲಿಕೆ ಅನಿವಾರ್ಯ

    ಶಿವಮೊಗ್ಗ: ಉದ್ಯೋಗ ಸ್ಥಳದಲ್ಲಿ ಸಂವಹನ ಪ್ರಕ್ರಿಯೆಗೆ ಭಾಷೆ ಅಗತ್ಯ ಇರುವುದರಿಂದ ವಿದ್ಯಾರ್ಥಿಗಳು ಮಾತೃ ಭಾಷೆಯೊಂದಿಗೆ ಇಂಗ್ಲಿಷ್ ಕಲಿಯಲೇಬೇಕು ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಅವಿನಾಶ್ ಹೇಳಿದರು.

    ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಪ್ರವಾಸೋದ್ಯಮ ಅಧ್ಯಯನ ವಿಭಾಗದಿಂದ ಓರಿಯಂಟೇಷನ್ ಆನ್ ಎಂಪ್ಲಾಯಬಿಲಿಟಿ ಸ್ಕಿಲ್ಸ್ ಆ್ಯಂಡ್ ಇಂಡಸ್ಟ್ರಿ ಅವೇರ್ನೆಸ್ ವಿಷಯದ ಕುರಿತು ಏರ್ಪಡಿಸಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಆಂಗ್ಲ ಭಾಷೆ ಕಲಿಕೆಯಿಂದ ಎಲ್ಲ ಪ್ರದೇಶಗಳ ಜನರೊಂದಿಗೆ ಸಂವಹನ ನಡೆಸಲು ಅನುಕೂಲವಾಗುತ್ತದೆ. ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸುಲಲಿತವಾಗಿ ಸಂವಹನ ನಡೆಸಲು ಇದು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
    ಬೆಂಗಳೂರಿನ ಸಿದ್ದಾರ್ಥ ವಯಾಜ್ ಸಲ್ಯೂಶನ್ಸ್ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಬಾಬು ಕೋಶಿ ಮಾತನಾಡಿ, ಪ್ರವಾಸೋದ್ಯಮದಲ್ಲಿ ಜಾಗತಿಕವಾಗಿ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಸಂವಹನ ಮತ್ತು ಭಾಷಾ ಕೌಶಲಗಳನ್ನು ಬೆಳೆಸಿಕೊಳ್ಳುವ ಮೂಲಕ ಉದ್ಯೋಗಕ್ಕೆ ಸಿದ್ಧರಾಗಬೇಕು. ಇದಕ್ಕೆ ಪೂರಕವಾಗಿ ಶೈಕ್ಷಣಿಕ ಸಂಸ್ಥೆಗಳು ಪ್ರವಾಸೋದ್ಯೋಮ ನಡೆಸುವ ಉದ್ಯಮಗಳೊಂದಿಗೆ ಸಹಭಾಗಿತ್ವ ಹೊಂದುವ ಅನಿವಾರ್ಯವಿದೆ ಎಂದು ತಿಳಿಸಿದರು.
    ಬೆಂಗಳೂರು ನಗರ ವಿವಿ ಪ್ರವಾಸೋದ್ಯಮ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಉಪನ್ಯಾಸಕ ಎಂ.ಸಿ.ಪ್ರಸನ್ನಕುಮಾರ ಮಾತನಾಡಿ, ಪ್ರವಾಸೋದ್ಯಮ ಕೋರ್ಸ್‌ನ ಪಠ್ಯಕ್ರಮದ ಜತೆಗೆ ಗ್ಲೋಬಲ್ ಡಿಸ್ಟ್ರಿಬ್ಯೂಷನ್ ಸಿಸ್ಟಂ ಆ್ಯಂಡ್ ಕಂಪ್ಯೂಟರೈಸ್ಡ್ ರಿಸರ್ವೇಶನ್ ಸಿಸ್ಟಂ ಮತ್ತು ಇತರೆ ಡಿಪ್ಲೊಮಾ ಕೋರ್ಸ್‌ಗಳ ಕಲಿಕೆ ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿಗೆ ಸಹಾಯಕವಾಗುತ್ತದೆ ಎಂದರು.
    ಸಿದ್ದಾರ್ಥ ವಯಾಜ್ ಸಲ್ಯೂಶನ್ಸ್ ನಿರ್ದೇಶಕ ಡಾ. ತನುಜ್ ದೇವ್, ಪ್ರಮುಖರಾದ ಟಿ.ಸಿ.ನಟರಾಜ, ಡಾ. ಕೆ.ಎಸ್.ಸರಳಾ, ಡಾ. ಎ.ಶಿವಮೂರ್ತಿ, ಬಾಲಸ್ವಾಮಿ, ಯು.ಶಶಿರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts