

ಬನ್ನೂರು: ರೈತರು, ಸಾರ್ವಜನಿಕರಿಗೆ ಅನುಕೂಲವಾಗುವಂತ ಕೆಲಸವನ್ನು ನಿರ್ವಹಿಸುವ ಮೂಲಕ ನಿಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ತಿಳಿಸಿದರು.
ಪಟ್ಟಣದ ಸಂತೆಮಾಳದಲ್ಲಿ ಚಾಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ನೂತನ ನಿರ್ದೇಶಕರಾಗಿ ವಿಜಯ ಸಾಧಿಸಿದ ಜೆಡಿಎಸ್ ಮುಖಂಡರಾದ ಬೀಡನಹಳ್ಳಿ ದೇವರಾಜು, ಅತ್ತಳ್ಳಿ ಸತೀಶ್, ಮೇಗಳಕೊಪ್ಪಲು ಜಯರಾಮುರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕಾಂಗ್ರೆಸ್‌ನ ಭದ್ರಕೋಟಿಯಲ್ಲಿ ಜೆಡಿಎಸ್‌ನ ಮುಖಂಡರು ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ತಮ್ಮ ಖಾತೆಯನ್ನು ತೆರೆದು ಮುಂದಿನ ದಿನದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ನ ಬಾವುಟ ಹಾರಾಡುವಂತ ಮುನ್ಸೂಚನೆ ನೀಡಿದ್ದಾರೆ. ಸರ್ಕಾರದ ಆಡಳಿತಕ್ಕೆ ಜನರು ಬೇಸತ್ತಿದ್ದು, ಜನರೆಲ್ಲರು ಮುಂದಿನ ದಿನದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್‌ನ ಕಟ್ಟಾಳಿನಂತೆ ನಿರಂತರವಾಗಿ ಪಕ್ಷದ ದ್ಯೇಯೋದ್ದೇಶದಿಂದ ಕೆಲಸ ಮಾಡುವ ಮೂಲಕ ಜನರಿಗೆ ಹತ್ತಿರವಾಗಿದ್ದೇನೆ. ಹಾಗಾಗಿ ಸಹಕಾರ ಸಂಘದಲ್ಲಿ ಜೆಡಿಎಸ್‌ನ ಬೆಂಬಲಿಗರು ತಮ್ಮ ಖಾತೆ ತೆಗೆಯುವ ಮೂಲಕ ಜನ ಸೇವೆಗೆ ನಿಂತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬೀಡನಹಳ್ಳಿ ಪಿ. ನಾಗರಾಜು, ಯಡಹಳ್ಳಿಯ ಎಂ.ಸುರೇಶ್, ರಂಗಸ್ವಾಮಿ, ಬಾಣಗವಾಡಿ ನಾರಾಯಣ ಸ್ವಾಮಿ, ಮಾದೇಗೌಡ, ಚಿಕ್ಕಿರೇಗೌಡ, ನಿರಂಜನ್‌ಕುಮಾರ್,ನಾಗಣ್ಣ, ಶಿವಪ್ಪ, ಮಂಜುನಾಥ್, ನೀಲಕಂಠ, ಕೃಷ್ಣ, ಅನಿಲ್, ನಿಂಗಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.