ಭತ್ತದ ಬೆಳೆ ಉಳಿವಿಗೆ ಯಾಂತ್ರೀಕೃತ ಬೇಸಾಯ : ಶಶಿಧರ್ ಕೆ.ಜಿ.

hbr
ತಾಲೂಕು ಮಟ್ಟದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಹೆಬ್ರಿ ತಾಪಂ ಇಒ ಶಶಿಧರ್ ಕೆಜೆ ಉದ್ಘಾಟಿಸಿದರು
Published on

ಹೆಬ್ರಿ: ಮುಂದಿನ ದಿನಗಳಲ್ಲಿ ಕೃಷಿಯ ಪ್ರಮಾಣ ಕಡಿಮೆಯಾಗುತ್ತಾ ಹೋದರೆ ಆಹಾರ ಕೊರತೆ ಎದುರಿಸಬೇಕಾಗುತ್ತದೆ. ಆದ್ದರಿಂದ ಭತ್ತದ ಬೆಳೆ ಉಳಿವಿಗಾಗಿ, ಬೆಳೆಯನ್ನು ಲಾಭದಾಯಕವನ್ನಾಗಿ ಮಾಡಲು ಕೃಷಿ ವಿಜ್ಞಾನಿಗಳ ಸಲಹೆ ತಾಂತ್ರಿಕ ತರಬೇತಿ ಪಡೆದು ಕ್ರಮಬದ್ಧವಾಗಿ ಯಾಂತ್ರೀಕೃತ ಬೇಸಾಯ ಮಾಡಿ ಯಶಸ್ವಿಯಾಗಿ ಎಂದು ಹೆಬ್ರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜಿ. ಹೇಳಿದರು.

ಜಿಪಂ ಉಡುಪಿ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ತಾಪಂ ಹೆಬ್ರಿ, ಗ್ರಾಪಂ ಶಿವಪುರ ಹಾಗೂ ಶಿವದುರ್ಗೆ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಶಿವಪುರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಿರಿಯ ವಿಜ್ಞಾನಿ ಡಾ.ಧನಂಜಯ್, ನೇಜಿ ತಯಾರಿ, ಗದ್ದೆಯ ತಯಾರಿ ಕುರಿತು ಮಾಹಿತಿ ನೀಡಿದರು. ಬಿತ್ತನೆ ಬೀಜದಿಂದ ಹಿಡಿದು ಕಳೆ ನಿರ್ವಹಣೆ, ಬೆಳೆ, ಕಟಾವು, ಒಕ್ಕಣೆ ಇತ್ಯಾದಿ ಎಲ್ಲ ಹಂತದ ತರಬೇತಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.ಶಿವಪುರ ಗ್ರಾಪಂ ಅಧ್ಯಕ್ಷೆ ಶೋಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಮಣ್ಣು ತಜ್ಞ ಡಾ.ಜಯಪ್ರಕಾಶ್, ಕೃಷಿ ಜಿಲ್ಲಾ ವ್ಯವಸ್ಥಾಪಕಿ ಡಾ.ಸೌಮ್ಯಾ ಕುಮಾರಿ, ಶಿವಪುರ ಗ್ರಾಪಂ ಪಿಡಿಒ ಜ್ಯೋತಿ ಉಪಸ್ಥಿತರಿದ್ದರು. ನಂದಿನಿ ಪ್ರಾರ್ಥಿಸಿ, ಸವಿತಾ ಸ್ವಾಗತಿಸಿದರು. ನವ್ಯಾ ಪ್ರಾಸ್ತಾವಿಕ ಮಾತನಾಡಿದರು. ಉಮಾ ಕಾರ್ಯಕ್ರಮ ನಿರೂಪಿಸಿದರು. ಬಬಿತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net