ಕುವೆಂಪು ಸಾಹಿತ್ಯದಲ್ಲಿದೆ ರೈತ, ಪರಿಸರ ಪ್ರೀತಿ

30 mlv 6
Published on

ಮಳವಳ್ಳಿ: ರಾಷ್ಟ್ರಕವಿ ಕುವೆಂಪು ಅವರು ಅನ್ನದಾತರು, ಮಲೆನಾಡನ್ನು ಅತಿಯಾಗಿ ಪ್ರೀತಿಸುತ್ತಿದ್ದರಿಂದ ಅವರ ಸಾಹಿತ್ಯದಲ್ಲಿ ರೈತ ಹಾಗೂ ಪರಿಸರದ ಬಗ್ಗೆ ಮನಮುಟ್ಟುವಂತೆ ವಿವರಿಸಿದ್ದಾರೆ ಎಂದು ಡಿಡಿಪಿಐ ಕಚೇರಿ ಕನ್ನಡ ವಿಷಯ ಪರಿವೀಕ್ಷಕ ನಾಗೇಂದ್ರಮೂರ್ತಿ ತಿಳಿಸಿದರು.


ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ನಾಡಿನ ಹೆಮ್ಮೆಯ ಕವಿ ಮುಕುಟ ಕುವೆಂಪು ಎಂದ ಅವರು, ನಾಡು, ನುಡಿ ಸೇರಿದಂತೆ ರೈತರ ಹಾಗೂ ಪರಿಸರದ ಮೇಲಿನ ಕಾಳಜಿಯನ್ನು ಅವರ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಕನ್ನಡದ ಅದ್ವಿತೀಯ ಕವಿ ಕುವೆಂಪು ಅವರು ಬರೆದ ಪುಸ್ತಕಗಳನ್ನು ಇಂದಿನ ಯುವ ಪೀಳಿಗೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಆದರ್ಶ ಜೀವನ ನಡೆಸಬಹುದು ಎಂದರು.


ಕಸಾಪ ತಾಲೂಕು ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ಕುವೆಂಪು ಅವರ ಸರಳತೆಯ ಬದುಕನ್ನು ವಿದ್ಯಾರ್ಥಿ ದೆಸೆಯಲ್ಲೇ ಮೈಗೂಡಿಸಿಕೊಳ್ಳಲು ಅವರ ರಚಿಸಿದ ಪುಸ್ತಕಗಳನ್ನು ಅಧ್ಯಯನ ಮಾಡುವಂತೆ ಸಲಹೆ ನೀಡಿದರು.


ಕಸಾಪ ಪ್ರಧಾನ ಕಾರ್ಯದರ್ಶಿ ಎಚ್.ಎನ್.ಪುಟ್ಟಸ್ವಾಮಿ, ಖಜಾಂಚಿ ಮಾದೇಗೌಡ, ಗೌರವ ಕಾರ್ಯದರ್ಶಿ ಮಹಾಲಿಂಗಯ್ಯ, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ನಿವೃತ್ತ ಶಿಕ್ಷಕ ರಾಮು ದಡಮಳ್ಳಿ, ಉಪನ್ಯಾಸಕ ನಿಂಗರಾಜು, ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹದೇವಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net