ಹಾವು ಕಚ್ಚಿ ರೈತ ಸಾವು

Published on

ಮಾಗಡಿ : ರಾಗಿ ಹೊಲದಲ್ಲಿ ಕಳೆ ಕೀಳುವ ವೇಳೆ ಹಾವು ಕಡಿದು ರೈತ ಸಾವನ್ನಪ್ಪಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.

Farmer Channiah

ತಾಲೂಕಿನ ಕಾಡು ರಾಮನಹಳ್ಳಿ ಗ್ರಾಮದ ರೈತ ಚನ್ನಯ್ಯ(75) ಹಾವು ಕಡಿತದಿಂದ ಮೃತಪಟ್ಟವರಾಗಿದ್ದಾರೆ. ತಮ್ಮ ಜಮೀನಿನಲ್ಲಿ ಮಂಗಳವಾರ ರಾಗಿ ಹೊಲದಲ್ಲಿ ಕಳೆ ತೆಗೆಯುವ ವೇಳೆ ನಾಗರ ಹಾವು ಚನ್ನಯ್ಯ ಅವರ ಬಲಗಾಲಿನ ಹೆಬ್ಬೆರಳಿಗೆ ಕಚ್ಚಿತ್ತು.

ಕೂಡಲೇ ಇವರನ್ನು  ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.  ಕಾಡು ರಾಮನಹಳ್ಳಿ ಗ್ರಾಮದ ಚನ್ನಯ್ಯ  ಅವರ ಜಮೀನಿನಲ್ಲಿಯೇ ಅಂತ್ಯಕ್ರಿಯೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net