ಕನಕಪುರ: ತಾಲೂಕಿನ ಉಯಂಬಳ್ಳಿ ಹೋಬಳಿ ಹೆಗ್ಗನೂರುದೊಡ್ಡಿ ಗ್ರಾಮ ಸಮೀಪ ರಾಗಿಕಣದಲ್ಲಿ ಮಲಗಿದ್ದ ರೈತ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಹೆಗ್ಗನೂರುದೊಡ್ಡಿ ಗ್ರಾಮದ ಕರಿಯಪ್ಪ(75) ಮೃತ.
ರಾಗಿ ಕಣದಲ್ಲಿ ಒಕ್ಕಣೆ ಮಾಡಿ ರಾಗಿ ಕಾಯಲು ಶನಿವಾರ ರಾತ್ರಿ ಅಲ್ಲಿಯೇ ಮಲಗಿದ್ದಾಗ ವೇಳೆ ಭಾನುವಾರ ಬೆಳಗಿನ ಜಾವ ಆನೆ ದಾಳಿ ಮಾಡಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಉಪವಲಯ ಸಂರಕ್ಷಣಾಧಿಕಾರಿ ನಾಗೇಂದ್ರ, ಜಿಲ್ಲಾ ಅರಣ್ಯ ಅಧಿಕಾರಿ ಸುರೇಂದ್ರ, ಆರ್‌ಎಫ್‌ಒ ಅನಿಲ್, ಆರ್‌ಎಫ್‌ಒ ಸದಾಶಿವ, ಸಾತನೂರು ಸಬ್ ಇನ್‌ಸ್ಪಡಕ್ಟರ್ ದುರ್ಗೇಗೌಡ, ಮುಖಂಡರಾದ ಏಳಗಳ್ಳಿ ರವಿ, ಹೊಗ್ಗನೂರು ವಿಜಿ, ಜಗದೀಶ್, ಸಂಗಮ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.