ಅಪಘಾತದಲ್ಲಿ ರೈತ ಸಾವು

Published on

ರಾಮನಗರ: ರಾಮನಗರ ಸಂಚಾರಿ ಠಾಣಾ ವ್ಯಾಪ್ತಿಯ ಬೆಂಗಳೂರು ಮೈಸೂರು ಹೆದ್ದಾರಿಯ ಕೊಂಕಾಣಿದೊಡ್ಡಿ ಬಳಿ ಮಂಗಳವಾರ ಮಧ್ಯರಾತ್ರಿ ಲಾರಿ ಮತ್ತು ಗೂಡ್ಸ್​ ವಾಹನದ ನಡುವೆ ನಡೆದ ಅಪಘಾತದಲ್ಲಿ ಓರ್ವ ರೈತ ಮೃತಪಟ್ಟು, ಚಾಲಕ ಗಾಯಗೊಂಡಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆ ತಾಲೂಕಿನ ಬಲೇನಹಳ್ಳಿ ಸೋಮೇಶ್​ (42) ಮೃತ. ಗೂಡ್ಸ್​ ವಾಹನ ಚಾಲನೆ ಮಾಡುತ್ತಿದ್ದ್ದ, ಇದೇ ಗ್ರಾಮದ ರಾಜು (32) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಲೇನಹಳ್ಳಿ ಗ್ರಾಮದ ಹೂ ಬೇಸಾಯ ಮಾಡಿಕೊಂಡಿದ್ದ ಸೋಮೇಶ್​, ತಾವು ಬೆಳೆದ ಹೂವನ್ನು ಪ್ರತಿ ದಿನ ಬೆಂಗಳೂರಿನ ಕೆ.ಆರ್​.ಮಾರುಕಟ್ಟೆಗೆ ಸಾಗಿಸುತ್ತಿದ್ದರು. ಎಂದಿನಂತೆ ಮಂಗಳವಾರ ರಾತ್ರಿಯೂ ಚಾಲಕ ರಾಜು ಜತೆಗೆ ಗೂಡ್ಸ್​ ವಾಹನದಲ್ಲಿ ಹೂ ತುಂಬಿಕೊಂಡು ಮಾರುಕಟ್ಟೆಗೆ ಹೋಗುವ ವೇಳೆ ತಮಿಳುನಾಡು ನೋಂದಣಿ ಸಂಖ್ಯೆ ಹೊಂದಿರುವ ಲಾರಿ ಸಂಚಾರಿ ನಿಯಮ ಮೀರಿ ಎಡಲೇನ್​ನಿಂದ ಮಧ್ಯಲೇನ್​ಗೆ ಬಂದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದ್ದು, ಸೋಮೇಶ್​ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಸಂಬಂಧ ಮೃತನ ಸಹೋದರ ಮಂಜು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net