

ಸಿಂಧನೂರು: ಸಹಕಾರಿ ಸಂಘಗಳಿಂದ ಹಲವು ಯೋಜನೆಗಳು ರೈತರಿಗೆ ದೊರಕುತ್ತಿದ್ದು, ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಹೇಳಿದರು.
ಇದನ್ನೂ ಓದಿ: ಅರ್ಥಿಕ ಅಭಿವೃದ್ಧಿಗೆ ಅಣಬೆ, ಜೇನು ಸಾಕಾಣಿಕೆ ಸಹಕಾರಿ
ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಚೇರಿ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ಪರಿಸ್ಥತಿ ಬದಲಾವಣೆ ಕಂಡಿದೆ. ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಸಹಕಾರಿ ಸಂಘಗಳು ಅತ್ಯುತ್ತಮ ಕೆಲಸ ಮಾಡುತ್ತಿವೆ. ಕೆಲವು ಸಹಕಾರಿ ಸಂಘಗಳು ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿವೆ. ರೈತರಿಗೆ ಹೆಚ್ಚಿನ ನೆರವು ನೀಡಿವೆ. ಬ್ಯಾಂಕ್‌ಗಳಿಗಿಂತ ರೈತರು ಹೆಚ್ಚಾಗಿ ಸಹಕಾರಿ ಸಂಘಗಳನ್ನು ಮೆಚ್ಚಿಕೊಂಡಿದ್ದಾರೆಂದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ನಿರ್ದೇಶಕ ಸೋಮನಗೌಡ ಬಾದರ್ಲಿ, ಶಾಖಾ ವ್ಯವಸ್ಥಾಪಕ ಶರಣಪ್ಪ ಸಿದ್ದಾಪುರ, ವೃತ್ತ ವೀಕ್ಷಕ ಶರಣಪ್ಪ, ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮಾಲಿ ಪಾಟೀಲ್ ಮುಳ್ಳೂರು, ಉಪಾಧ್ಯಕ್ಷ ಖಲೀಲ್ ಅಹ್ಮದ್,
ಆಡಳಿತ ಮಂಡಳಿ ಸದಸ್ಯ ಆದನಗೌಡ ಕಲ್ಲೂರು ಪ್ರಮುಖರಾದ ಬಸನಗೌಡ ಭೂತಲದಿನ್ನಿ, ಮೌಲಪ್ಪ, ಟಿಪ್ಪು ಸುಲ್ತಾನ್ ಮುಳ್ಳೂರು, ನರಸರಡ್ಡಿ, ಶರಣಪ್ಪ, ದುಗ್ಗಮ್ಮ, ಅಂಬಮ್ಮ, ಮಲ್ಲಮ್ಮ, ಮಹಾದೇವಮ್ಮ, ಮಹೆಬೂಬಸಾಬ ಸಾಹುಕಾರ, ವೀರಭದ್ರಪ್ಪ ಭಂಡಾರಿ, ಬಸವಂತರಾಯಗೌಡ, ದೊಡ್ಡನಗೌಡ, ಮಹಾಕಾಳೆಪ್ಪ, ಬಸವನಗೌಡ ಕಾರಗಿನೂರು, ತಿಮ್ಮನಗೌಡ, ಶರಣಬಸವ, ಸಿಇಒ ನವಿನಕುಮಾರ ಗಡಾದ್ ಇದ್ದರು.