ವಿಷ ಕುಡಿದು ರೈತ ಆತ್ಮಹತ್ಯೆ

Sucide
Published on

ಮದ್ದೂರು: ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ರೈತ ಸಾಲಬಾಧೆ ತಾಳದೆ ಶನಿವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಾಮೇಗೌಡ-ಜಯಮ್ಮ ದಂಪತಿ ಪುತ್ರ ಎಚ್.ಆರ್.ನಾಗರಾಜು (48) ಮೃತ ರೈತ.

ರೈತ ಎಚ್.ಆರ್.ನಾಗರಾಜು ಅವರ ತಂದೆಯ ಹೆಸರಿನಲ್ಲಿದ್ದ 3 ಎಕರೆ ಪ್ರದೇಶದಲ್ಲಿ ಕಬ್ಬು, ಭತ್ತ ಹಾಗೂ ರಾಗಿ ಬೆಳೆಗಳನ್ನು ಬೆಳೆದಿದು,್ದ ಬೆಳೆಗಳನ್ನು ಬೆಳೆಯಲು ಪತ್ನಿ ಶಶಿಕಲಾ ಅವರ ಹೆಸರಿನಲ್ಲಿ ಒಡವೆಗಳನ್ನು ಗಿರವಿ ಇಟ್ಟು 80 ಸಾವಿರ, ಬಸವೇಶ್ವರ ಸ್ವ ಸಹಾಯ ಸಂಘದಲ್ಲಿ 1 ಲಕ್ಷ ರೂ., ಧರ್ಮಸ್ಥಳ ಸಂಘದಲ್ಲಿ 20 ಸಾವಿರ ರೂ., ಹುಲಿಗೆರೆಪುರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 20 ಸಾವಿರ ರೂ. ಹಾಗೂ 4 ಲಕ್ಷ ರೂ.ಕೈ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಆಗಾಗ್ಗೆ ವ್ಯವಸಾಯದಲ್ಲಿ ನಷ್ಟವಾಗುತಿದ್ದು, ಕೃಷಿ ಚಟುವಟಿಕೆಗಳನ್ನು ನಿಲ್ಲಿಸಿ ಬಿಡುತ್ತೇನೆ ಎಂದು ಕುಟುಂಬದವರಿಗೆ ಹೇಳುತ್ತಿದ್ದರು ಎಂದು ಮೃತ ರೈತನ ತಾಯಿ ಜಯಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶುಕ್ರವಾರ ರಾತ್ರಿ 9 ಗಂಟೆಯ ಸಮಯದಲ್ಲಿ ವಿಷ ಕುಡಿದ ರೈತ ಎಚ್.ಆರ್.ನಾಗರಾಜು ಮಲಗಿದ್ದು, ಬೆಳಗ್ಗೆ ಎದ್ದ ನಂತರ ವಾಂತಿ ಮಾಡಲು ಪ್ರಾರಂಭ ಮಾಡಿಕೊಂಡಾಗ ಮನೆಯವರಿಗೆ ವಿಷ ಕುಡಿದಿರುವುದಾಗಿ ತಿಳಿಸಿದ್ದಾರೆ. ನಂತರ ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾಗ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net