ಜೋಳದ ತೆನೆಯಲ್ಲಿ ಅರಳಿತ್ತು ರಾಮಮಂದಿರ; ನಿಮ್ಮ ಕಾರ್ಯಕ್ಕೆ ನಮ್ಮದೊಂದು ಸಲಾಮ್ ಎಂದ ರಾಮಭಕ್ತರು

Koppal Rammandir
Published on

ಕೊಪ್ಪಳ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22, 2024ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ರಾಮಭಕ್ತರಿಗೆಲ್ಲರಿಗೂ ಅಯೋಧ್ಯೆಗೆ ತೆರಳಲು ಸಾಧ್ಯವಾಗುವುದಿಲ್ಲ. ಆದರೆ, ಇಲ್ಲೊಬ್ಬ ಭಕ್ತ ತಮ್ಮೂರಲ್ಲೆ ವಿಭಿನ್ನವಾಗಿ ರಾಮಮಂದಿರ ನಿರ್ಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.

ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದ ರೈತ ತಾತನಗೌಡ ಖಾಸಗಿ ಸೀಡ್ಸ್​ ಕಂಪನಿಯ ಸಹಕಾರದೊಂದಿಗೆ ತಾವು ಬೆಳೆದ ಮೆಕ್ಕೆಜೋಳದಲ್ಲಿ ರಾಮಮಂದಿರವನ್ನು ನಿರ್ಮಿಸಿ ಭಕ್ತಿಯನ್ನು ಮೆರೆದಿದ್ದಾರೆ.

Rammandir

ಈ ಕುರಿತು ಮಾತನಾಡಿರುವ ರೈತ ತಾತನಗೌಡ ರಾಮಮಂದಿರ ನಿರ್ಮಾಣಕ್ಕೆ 5 ಸಾವಿರ ಮೆಕ್ಕೆಜೋಳದ ತೆನೆಗಳನ್ನ ಬಳಸಲಾಗಿದೆ. ಒಂದು ವಾರದಿಂದ 12 ಜನರು ಸೇರಿ ರಾಮ ಮಂದಿರ ನಿರ್ಮಿಸಿದ್ದಾರೆ. ಈ ಮಂದಿರ ನಿರ್ಮಾಣ ಮಾಡಲು ಖಾಸಗಿ ಸೀಡ್ಸ್ ಕಂಪನಿ ರೈತರಿಗೆ ಸಹಕಾರ ನೀಡಿದೆ. ಈ ರಾಮಮಂದಿರದ ಮಾದರಿಯನ್ನ ಜನವರಿ 22 ರವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು, ಇಲ್ಲಿಂದಲೇ ಅಯೋದ್ಯೆಯ ರಾಮ ಮಂದಿರದ ದರ್ಶನವನ್ನ ಹಳ್ಳಿಯ ರೈತರು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ರೈತರ ಫಸಲಿನಿಂದ ನಿರ್ಮಾಣವಾಗಿರುವ ಈ ರಾಮ ಮಂದಿರ ಎಲ್ಲರ ಆಕರ್ಷಣಿಯವಾಗಿದೆ. ತಮ್ಮೂರಲ್ಲೆ ತಾವು ಬೆಳೆದ ಮೆಕ್ಕೆ ಜೋಳದ ಫಸಲಿನಲ್ಲೇ ರಾಮನ ಸ್ವರೂಪ ಕಾಣ್ತಿರೋ ರೈತರಿಗೆ ನಮ್ಮದೊಂದು ಸಲಾಮ್ ಎಂದು ರಾಮಭಕ್ತರು ರೈತನ ಶ್ರಮವನ್ನು ಹಾಡಿಹೊಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net